ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಾಂಗ ಮಂತ್ರಾಲಯದಲ್ಲಿ ನೋಂದಾವಣೆ ಮಾಡಿಸಿಕೊಳ್ಳದೆ ಅಕ್ರಮವಾಗಿ ಉದ್ಯೋಗ ಬರವಸೆ ನೀಡಿ ಉದ್ಯೋಗಿಗಳಿಂದ ಅಕ್ರಮವಾಗಿ ಹಣ ಪಡೆದು ವಿದೇಶ ಉದ್ಯೋಗದ ಆಮಿಷ ನೀಡುತ್ತಿರುವ ಏಜೆನ್ಸಿಗಳ ಮೇಲೆ ಪೊಲೀಸ್ ಆಯುಕ್ತರು ಸಂಸ್ಥೆಗಳು ವಿರುದ್ಧ ಕ್ರಮ ಕೈಗಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಆಗ್ರಹಿಸಿದೆ.

ನಗರದ ಬೆಂದೂರವೆಲ್ಲ್ ಬಳಿ ಇರುವ hire glow elegent overseas international (opc) ಎಂಬ ಸಂಸ್ಥೆಯು ನ್ಯೂಜಿಲೆಂಡ್ ನಲ್ಲಿರುವ VALARIS ಎಂಬ ರಿಗ್ ಸಂಸ್ಥೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕನ್ನಡ ಜಿಲ್ಲೆಯ ಸುಮಾರು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ಪ್ರತಿ ವ್ಯಕ್ತಿಗಳಿಂದ ತಲಾ ಒಂದು ಲಕ್ಷದ 85,000 ನೇರವಾಗಿ, ಹಾಗೂ ಏಜೆಂಟ್ಗಳ ಮುಖಾಂತರ ಸುಮಾರು 60 ಮಂದಿ ಎರಡುವರೆ ಮೂರು ಲಕ್ಷ ರೂಪಾಯಿಗಳ ಮೊತ್ತವನ್ನು ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಇವರುಗಳಿಗೆ ಮೆಡಿಕಲ್ ಫಿಟೈಸ್ ಮಾಡಿಸಿಕೊಂಡಿದ್ದು,ಜನವರಿ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್ ಗೆ ಸಹಿ ಹಾಕಲು ಕಚೇರಿಗೆ ಬರುವಂತೆ ತಿಳಿಸಿರುತ್ತಾರೆ,ಜನವರಿ ಕೊನೆಯ ವಾರದಲ್ಲಿ ತಮಗೆ ವೀಸಾ ಪ್ರಕ್ರಿಯೆ ಪ್ರಾರಂಭಿಸಿರುತ್ತಾರೆಂದು ಗ್ರೇಟಲ್ ಕ್ವಾಡ್ರಸ್ ಹಾಗೂ ಅಶ್ವಿನಿ ಆಚಾರ್ಯ ಹಾಗೂ ಚೈತ್ರ ಎಂಬುವವರು ಸಂದರ್ಶನಕ್ಕೆ ಬರುವಂತೆ ಸೂಚಿಸಿದ್ದಾರೆ.ನೀವು ಟೆನ್ಶನ್ ತೆಗೆದುಕೊಳ್ಳಬೇಡಿ ನಾವು ಇದ್ದೇವೆ ನಿಮ್ಮ ಕೆಲಸ ಖಾತರಿ ಎಂದು ಸ್ಥಳೀಯ ನಿವಾಸಿಗಳಾದ ಇಬ್ಬರು ಮಹಿಳೆಯರು ಕೂಡ ಬಡಪಾಯಿಗಳಿಗೆ ಧೈರ್ಯ ತುಂಬಿದ್ದಾರೆ.
ಈ ಕಂಪನಿಗೆ ಹೊರ ರಾಜ್ಯಗಳಿಂದ ಕೇರಳ ತಮಿಳುನಾಡು ಗೋವಾ ಆಂಧ್ರಪ್ರದೇಶದಿಂದ ಇತರೆ ಏಜೆನ್ಸಿಗಳ ಮುಖಾಂತರ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿಗಳನ್ನು ಸರಿಸುಮಾರು 300 ವ್ಯಕ್ತಿಗಳಿಗಿಂತ ಹೆಚ್ಚು ಮಂದಿಯಿಂದ ಹಣವನ್ನು ಪಡೆದುಕೊಂಡಿರುತ್ತಾರೆ ಇದರ ಮೊತ್ತ ಸರಿಸುಮಾರು ಎಂಟು ಕೋಟಿಗೂ ಅಧಿಕ ಮೊತ್ತವನ್ನು ಪಡೆದು ಕೆಲಸನೂ ಇಲ್ಲದೆ ಕೊಟ್ಟ ಹಣನೂ ನೀಡದೆ ತಲೆಮರೆಸಿಕೊಂಡಿದ್ದಾರೆ.
ನವೆಂಬರ್ ನಿಂದ ಒನ್ಲೈನ್ ಮೂಲಕ ಈ ನಕಲಿ ಕಂಪನಿ ಯಾ ಕಾರ್ಯರಂಭ ನಡೆಯುತ್ತಿದ್ದು ಮುಂಬೈ ಮೂಲದ ಹುಸೈನ್ ಲಾ ಅತಿವುಲ್ಲಾ ಖಾನ್ ಎಂಬಾತನನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಸುಮಾರು65೦೦೦ ರುಪಾಯಿಂದ 185೦೦೦ ರುಪಾಯಿ ವರೆಗೆ 185 ಕ್ಕೂ ಅಧಿಕ ಜನ ಪಾವತಿಸಿದ್ದಾರೆ. ಅಡ್ವಾನ್ಸ್ ಪಾವತಿಸಿದ ಎಲ್ಲ ಜನರಿಗೆ ಕರೆಮಾಡಿ ನಿಮ್ಮ ದಾಖಲೆಗಳು ಬಂದಿದೆ ನಿಮ್ಮ ಪೂರ್ತಿ ಮೊತ್ತವನ್ನು ಇಂದೇ ಪಾವತಿಸಬೇಕೆಂದು ರಾತ್ರಿ ಹೊತ್ತಿನಲ್ಲೂ ಕರೆ ಮಾಡಿ ಕಚೇರಿಗೆ ಬಂದು 3 ಗಂಟೆಗೆ ಹಲವರು ಪಾವತಿಸುತ್ತಾರೆ.ಬಳಿಕ ಎಪ್ರಿಲ್ ಕೊನೆಯವಾರದಲ್ಲಿ ಇವರು ಕೊಟ್ಟಂತಹ ಪಾಸ್ಪೊರ್ಟ್ ಹಾಗೂ ಇನ್ನಿತರ ದಾಖಲೆಗಳು ಪೋಸ್ಟ್ ಮೂಲಕ ಹಿಂದೆ ಬಂದಿದ್ದು ವಿಚಾರಣೆಗೊಳಪಡಿಸಿದಾಗ ಇದೊಂದು ಮೋಸದ ಜಾಲವೆಂದು ತಿಳಿದುಬಂದಿದೆ. ದ.ಜಿಲ್ಲೆ ಅಲ್ಲದೆ ಇನ್ನಿತರ ರಾಜ್ಯಗಳಿಂದ ಸುಮಾರು ಜನ ಉದ್ಯೋಗಕ್ಕಾಗಿ ಕಂಪೆನಿಯ 14 ಖಾತೆಗಳಿಗೆ ಹಣಪಾವತಿಸಿರುತ್ತಾರೆ. ವಿದೇಶದಲ್ಲಿ ಕೆಲಸ ಸಿಗೋ ಬರದಲ್ಲಿ ಸಾಲಮೂಲ ಮಾಡಿ ಹಣ ಪಾವತಿಸಿದವರ ಬದುಕು ಮೂರಬಿಟ್ಟೆಯಾಗಿದೆ.
ಬಳಿಕ ಕಾಂಗ್ರೆಸ್ ಕಾರ್ಮಿಕ ಘಟಕ ಸದಸ್ಯರನ್ನು ಸಂಪರ್ಕಿಸಿದ ಯುವಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದು ಅದೇ ರೀತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತದನಂತರ ಕದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು ಸಿಸಿಬಿ ಅಧಿಕಾರಿಗಳು ಈಗಾಗಲೇ ಮಾಲಕರಾದ ಮಾಸಿವುಲ್ಲ ಅತಿಯುಲ್ಲ ಖಾನ್ , ಗ್ರೇಟಲ್ ಕ್ವಾಡ್ರಸ್ , ಅಶ್ವಿನಿ ಆಚಾರ್ಯ , ಚೈತ್ರ ವಿರುದ್ಧ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಈಗಾಗಲೇ ಅಧಿಕಾರಿಗಳು ಕಚೇರಿಯನ್ನು ಸೀಸ್ ಮಾಡಿದ್ದು ಅದರಲ್ಲಿರೋ ಕಂಪ್ಯೂಟರ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


