ಮಂಗಳೂರು : ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿ ಆಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಇಲ್ಲಿನ ಕಂಕನಾಡಿಯ ಹೋಟೆಲ್ ಲಾಡ್ಜ್ನಲ್ಲಿ ಬೆಂಕಿ ಹತ್ತಿಸಿಕೊಂಡು ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಯಶರಾಜ್ ಎಸ್ ಸುವರ್ಣ (43) ಎಂದು ಗುರುತಿಸಲಾಗಿದೆ. ಈತ ಮೊದಲು ಅತ್ತಾವರ ದಲ್ಲಿ ನೆಲೆಸಿದ್ದರು ಈಗ ಬಿಕರ್ನಕಟ್ಟೆ ನಿವಾಸಿ. ನವೆಂಬರ್ 22 ರ ಬುಧವಾರ ತಡರಾತ್ರಿ ಹೋಟೆಲ್ನ ಎರಡನೇ ಮಹಡಿಯ ಕೊಠಡಿಯಲ್ಲಿ ಈ ದುರಂತ ಘಟನೆ ನಡೆದಿದೆ.
ನವೆಂಬರ್ 15 ರಂದು ಯಶರಾಜ್ ಲಾಡ್ಜ್ಗೆ ಚೆಕ್-ಇನ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಒಬ್ಬರೇ ಉಳಿದುಕೊಂಡಿದ್ದರು. ಬುಧವಾರ ರಾತ್ರಿ ಊಟ ಮುಗಿಸಿ ಕೋಣೆಯಲ್ಲಿ ಒಬ್ಬರೇ ಇದ್ದಾಗ ಮಧ್ಯರಾತ್ರಿ ಅವರ ಕೊಠಡಿಯ ಬಾಗಿಲಿನಿಂದ ಹೊಗೆ ಬರುತ್ತಿರುವುದು ಕಂಡು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದು (ಒಳಗಿನಿಂದ ಬೀಗ ಹಾಕಲಾಗಿತ್ತು) ನೋಡಿದ್ದಾಗ ಮೃತಪಟ್ಟಿರುವುದು ಕಂಡುಬಂದಿದೆ.
ಯಶರಾಜ್ ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


