Friday, March 13, 2026
Flats for sale
Homeಜಿಲ್ಲೆಮಂಗಳೂರು ; ರಾಹುಲ್ ಗಾಂಧಿಗೆ ಕಪಾಲಮೋಕ್ಷ ಮಾಡಬೇಕು ಎಂಬ ಹೇಳಿಕೆ ; ಮಂಗಳೂರು ಉತ್ತರ ...

ಮಂಗಳೂರು ; ರಾಹುಲ್ ಗಾಂಧಿಗೆ ಕಪಾಲಮೋಕ್ಷ ಮಾಡಬೇಕು ಎಂಬ ಹೇಳಿಕೆ ; ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ FIR ದಾಖಲು.

ಮಂಗಳೂರು : ಹಿಂದೂ ವಿರೋಧಿ ಹೇಳಿಕೆಗಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನ ಒಳಗೆ ಬಂಧಿಸಿ ಕಪಾಳಮೋಕ್ಷ ಮಾಡಬೇಕು ಎಂದು ಸುರತ್ಕಲ್ ಬಿಜೆಪಿ ಶಾಸಕ ಭರತ್ ಶೆಟ್ಟಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಹೇಳಿದ್ದರು ಈ ಹಿನ್ನೆಲೆ ಕಾವೂರು ಪೋಲಿಸ್ ಠಾಣೆಯಲ್ಲಿ F.I.R ದಾಖಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೆಟರ್ ಅನೀಲ್ ಕುಮಾರ್ ದೂರಿನ ಹಿನ್ನೆಲೆ BNS 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಕೂಡ ಭರತ್ ಶೆಟ್ಟಿಯ ಹೇಳಿಕೆಯನ್ನು ಖಂಡಿಸಿ ಆಕ್ರೋಶ ಹೋರಹಾಕಿದ್ದರು. ಇದೀಗ ಪೋಲಿಸರು ಶಾಸಕ ಭರತ್ ಶೆಟ್ಟಿ ಯವರನ್ನು ಬಂದಿಸುತ್ತಾರೋ ಆಥವಾ ಪೋಲಿಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆಮಾಡುತ್ತಾರೊ ಎಂಬುದನ್ನು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular