Thursday, March 12, 2026
Flats for sale
Homeಜಿಲ್ಲೆಮಂಗಳೂರು : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕೂಟರ್ ,ಇಬ್ಬರು ಯುವಕರು ಸಾವು.

ಮಂಗಳೂರು : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕೂಟರ್ ,ಇಬ್ಬರು ಯುವಕರು ಸಾವು.

ಮಂಗಳೂರು : ಜೂನ್ 28, ಬುಧವಾರ ರಾತ್ರಿ ಮೇರಿಹಿಲ್‌ನ ವಿಕಾಸ್ ಕಾಲೇಜು ಬಳಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಹದಿಹರೆಯದ ಯುವಕರು ಸಾವನ್ನಪ್ಪಿದ್ದಾರೆ.

ಮೃತರು ಸ್ಥಳೀಯ ನಿವಾಸಿಗಳಾದ ಪವನ್ (16) ಮತ್ತು ಚಿರಾಗ್ (15). ಒಬ್ಬ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಅಪಘಾತಕ್ಕೀಡಾದ ದ್ವಿಚಕ್ರ ವಾಹನವು ಬೋಂದೇಲ್ ಪದವಿನಂಗಡಿಯ ಕುಶಾಲ್ ಕುಮಾರ್ ಎಂಬುವವರ ಹೆಸರಿನಲ್ಲಿ ದಾಖಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular