ಮಂಗಳೂರು : ಮಂಗಳೂರಿನ ಹೊರವಲಯ ಮುಡಿಪುವಿನಲ್ಲಿ ರಸ್ತೆ ಬಂದ್ ಮಾಡಿ ಜನಸಾಮನ್ಯರಿಗೆ ತೊಂದರೆ ಉಂಟುಮಾಡಿ ರಸ್ತೆಯಲ್ಲಿ ಆಟೋ ಚಾಲಕರಿಗಾಗಿ ಈ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು.ಮಂಗಳೂರು ಇಫ್ತಾರ್ ಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋ ಕುರಿತು ವ್ಯಾಪಕವಾಗಿ ಭಾರೀ ಪರ ಮತ್ತು ವಿರೋಧ ಚರ್ಚೆ ನಡೆದಿತ್ತು.
ಈ ಬಗ್ಗೆ ಹೆಚ್ಚೆತ್ತ ಚುನಾವಣೆ ಆಯೋಗ ಜನಸಾಮನ್ಯರು ದಿನನಿತ್ಯ ಚಲಿಸುವ ಮುಖ್ಯ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ವ್ಯವಸ್ಥೆ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.ಈ ಬಗ್ಗೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ರಸ್ತೆ ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದೀರಿ ಎಂದು ಚುನಾವಣಾ ಆಯೋಗದಿಂದ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೂ ಮಾಡಲಾಗಿದೆ ಅಂತ ನೋಟಿಸ್ ನೀಡಲಾಗಿದೆ.


