ಮಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹದಿಹರೆಯದ ಹೆಣ್ಣುಮಕ್ಕಳನ್ನು ಪಟಾಯಿಸುವುದು ಅಧಿಕವಾಗಿದೆ. ಇದೀಗ ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಯುವಕನಿಗೆ ಬೆದರಿಕೆ ಸಂದೇಶ ಬಂದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ನಲ್ಲಿ ನಡೆದಿದೆ.
ಅನ್ಯ ಕೋಮಿನ ಯುವಕ ಯುವತಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಆಕೆಯ ಸಹೋದರನಿಗೆ ಬೆದರಿಕೆ ಸಂದೇಶ ಮತ್ತು ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಪೊಲೀಸರು ಸದಾಶಿವನಗರದ ಶಾರಿಕ್ ನೂರ್ಜಹಾನ್ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಆರೋಪಿ ಯುವತಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿದ್ದಾನೆ. ಬಳಿಕ ಯುವತಿಯ ಫೇಸ್ಬುಕ್ ಖಾತೆ ಮುಖಾಂತರ ಆಕೆಯ ಅಣ್ಣನಿಗೆ “ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಸಂದೇಶ ಕಳಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇನ್ನು, ಬೆದರಿಕೆ ಹಾಕಿದ ಆರೋಪಿ ಸೂರತ್ಕಲ್ನವನೇ ಎಂದು ಯುವತಿ ಹೇಳಿದ್ದಾಳೆ.ಆದರೆ ಸರಿಯಾದ ಸಾಕ್ಷ್ಯ ಸಿಗದ ಹಿನ್ನೆಲೆ ಯುವಕನನ್ನು ಪೊಲೀಸರು ವಿಚಾರಿಸಿ ಬಿಟ್ಟುಕಳುಹಿಸಿದ್ದಾರೆ.
ಯುವತಿಯ ಸಹೋದರಿನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಡೆತ್ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಡೆತ್ನೋಟ್ನಲ್ಲಿ “ಇಡ್ಯಾ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನೂ ಬಿಡಬಾರದು” ಎಂದು ಡೆತ್ನೋಟ್ ಬರೆದಿದ್ದಾಳೆ.
ಯುವತಿಯ ಅಣ್ಣನಿಗೆ ಯುವಕ ಇವತ್ತಿನಿಂದ ಗೇಮ್ ಸ್ಟಾರ್ಟ್ ಎಂದು ಹೇಳಿದ್ದು ನನ್ನ ಪ್ರೀತಿಸುವಂತೆ ನಿನ್ನ ತಂಗಿಗೆ ಹೇಳು ಎಂದು ಬೆದರಿಕೆ ಹಾಕಿದ್ದಾನೆ ,ಇದರಿಂದ ಮನನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ನಸುಕಿನ ಜಾವ 3 ಗಂಟೆ ಸುಮಾರಿಗೆ ಮಾತ್ರೆ ತಗೆದುಕೊಂಡಿದ್ದಾಳೆ.ಈ ಬಗ್ಗೆ ಯುವತಿಯು ನನಗೇನಾದರು ಆದ್ರೆ ಹುಡುಗನನ್ನು ಮತ್ತು ಅವನ ತಾಯಿಯನ್ನು ಬಿಡಬಾರದು ಎಂದು ಹೇಳಿದ್ದಾಳೆ. ಆರೋಪಿ ಯುವತಿಯನ್ನು ಅತ್ಯಾಚರ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದು ಯುವತಿಯ ಪೋಷಕರು ರಕ್ಷಣೆಕೋರಿ ಮತ್ತೊಮ್ಮೆ ಪೋಲೀಸರ ಮೊರೆಹೋಗಿದ್ದಾರೆ.