Wednesday, November 19, 2025
Flats for sale
Homeಜಿಲ್ಲೆಮಂಗಳೂರು ; ಮೂಡಬಿದ್ರೆ ಹೊಸ್ಮಾರು ಬಳಿ ಟಾಟಾ ಎ.ಸ್ ವಾಹನದಲ್ಲಿ ಅಕ್ರಮ ಗೋ ಸಾಗಾಟ,ಮೂವರು ಆರೋಪಿಗಳ...

ಮಂಗಳೂರು ; ಮೂಡಬಿದ್ರೆ ಹೊಸ್ಮಾರು ಬಳಿ ಟಾಟಾ ಎ.ಸ್ ವಾಹನದಲ್ಲಿ ಅಕ್ರಮ ಗೋ ಸಾಗಾಟ,ಮೂವರು ಆರೋಪಿಗಳ ಬಂಧನ.!

ಮಂಗಳೂರು ; ನ.15 ರಂದು ಸಂಜೆ 5.00 ಗಂಟೆಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಮೂಡಬಿದ್ರೆ ತಾಲೂಕು ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಟಾಟಾ ಎಸಿ ಕಂಟೈನರ್ ವಾಹನವೊಂದರಲ್ಲಿ ಅಕ್ರಮವಾಗಿ 3 ಜಾನುವಾರುಗಳನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಅದ್ಯಪಾಡಿ ನವಾಸಿ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ಫಕ್, ಅಬ್ದುಲ್ ಮೊಹಮ್ಮದ್ ನಿಶಾಮ್ ಎಂದು ತಿಳಿದುಬಂದಿದೆ. ಮೊಹಮ್ಮದ್ ಮನ್ಸೂರ್ ಮೇಲೆ ಒಟ್ಟು 29 ಪ್ರಕರಣಗಳು ವಿವಿದ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿದೆ. 2ನೇ ಆರೋಪಿ ಮೊಹಮ್ಮದ್ ಅಶ್ವದ್ ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿದೆ. ಹಾಗೂ 3ನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ನ ವಿರುದ್ದ ಇದು ಮೊದಲನೇ ಪ್ರಕರಣವಾಗಿದೆ.

ಆರೋಪಿಗಳ ವಿರುದ್ದ ಮೂಡಬಿದ್ರೆ ಅಪರಾಧ ಕ್ರಮಾಂಕ 178/2025 ಕಲಂ 111 ಬಿ.ಎನ್.ಎಸ್, 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular