ಮಂಗಳೂರು : ದ್ವಿಚಕ್ರ ವಾಹನ ಮತ್ತು ಮೀನು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜೆಪ್ಪಿನ ಮೊಗರು ಹಾಗೂ ಎಕ್ಕೂರು ಮಧ್ಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಡಿ.21ರಂದು ನಡೆದಿದೆ.
ಮೃತರನ್ನು ಸೂರತ್ಕಲ್ ಈದ್ಗ ಮಸೀದಿಯ ಕಟ್ಟಡದಲ್ಲಿರುವ ಅಲ್ಫಾ ಡ್ರೈವಿಂಗ್ ಸ್ಕೂಲ್ ನ ಅಧ್ಯಾಪಕ ಕಾಟಿಪಳ್ಳ ನಿವಾಸಿ ಅಬ್ದುಲ್ ರವೂಫ್ ಎಂದು ಗುರುತಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಚಾಲಕ ದುರಂತವಾಗಿ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಢಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ್ದು ,ದೇಹದ ಭಾಗಗಳು ಛಿದ್ರವಾಗಿದೆ. ಅಪಘಾತದ ಪರಿಣಾಮ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.


