ಮಂಗಳೂರು: ನೀರುಮಾರ್ಗ ಸಮೀಪದ ಪಡು ಭಟ್ರಕೊಡಿ ಶ್ರೀ ಮರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.27ರಂದು ಆರಂಭಗೊಂಡು ಮಾ.30ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಯವರು ತಿಳಿಸಿದ್ದಾರೆ.
ಮಾ.27ರಂದು ಬೆಳಗ್ಗೆ 8.00ರಿಂದ ಆಚಾರ್ಯಾದಿ ಋತ್ವಿಜರ ಆಗಮನ, ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ. 11.00ರಿಂದ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ ಗಂಟೆ 6.00ರಿಂದ ಆಚಾರ್ಯಾದಿ ಋಗರಣ ಪ್ರಾಸಾದ ಶುದ್ದಿ, ರಕ್ಕೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮಾ.27ರಂದು ಸಂಜೆ ಗಂಟೆ 3ಕ್ಕೆ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ, ಬೊಂಡಂತಿಲ ಕಲ್ಲುಡೇಲು ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನದಿಂದ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಿಂದ, ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನ, ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಿಂದ, ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಕಾಣಿಕೆ ಹೊರಟು ಪಡು ಬದಿನಡಿ ಶ್ರೀ ಅರಸು ಮುಂಡಿತ್ತಾಯ ಕ್ಷೇತ್ರದಲ್ಲಿ ಸೇರುವುದು. ಸಂಜೆ 4.00ಕ್ಕೆ ಬದಿನಡಿ ದೈವಸ್ಥಾನದಿಂದ ವೈಭವದ ಹಸಿರು ಹೊರೆಕಾಣಿಕೆ ಆರಂಭವಾಗಿ ಸಂಜೆ 5.30ಕ್ಕೆ ಪಡು ಭಟಕೋಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.
ಮಾ.28ರಂದು ಪೂರ್ವಾಹ್ನ 6.00ರಿಂದ ಧಾರ್ಮಿಕ ಕಾರ್ಯಕ್ರಮಗಳು, ಚಂಡಿಕಾಯಾಗ ಆರಂಭ. ಮಧ್ಯಾಹ್ನ ಗಂಟೆ 12.00ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6.00ರಿಂದ ದುರ್ಗಾನಮಸ್ಕಾರ ಪೂಜೆ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಮಾ.29ರಂದು ಬೆಳಗ್ಗೆ 6.00ರಿಂದ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಧಾರ್ಮಿಕ ಕಾರ್ಯಕ್ರಮ, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಮಾ.30ರಂದು ಬೆಳಗ್ಗೆ 8.30ರಿಂದ ಶ್ರೀ ದೇವರಿಗೆ ಕಲಶಾಭಿಷೇಕ ಪ್ರಾರಂಭವಾಗಲಿದ್ದು ಬೆಳಗ್ಗೆ 9.10ರಿಂದ ವೃಷಭ ಲಗ್ನ ಸುಮುಹೂರ್ತದಲ್ಲಿ 10.10ರ ಸಮಯ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ “ಬ್ರಹ್ಮಕಲಶಾಭಿಷೇಕ” ಪ್ರಸನ್ನ ಪೂಜೆ, ರಕ್ತಶ್ವರೀ ಪ್ರತಿಷ್ಠೆ ಕಲಶಾಭಿಷೇಕ, ಬೆಳಗ್ಗೆ ಗಂಟೆ 11.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ. ಮಧ್ಯಾಹ್ನ ಗಂಟೆ 12.00ರಿಂದ ಮಹಾ ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಸಂಜೆ ಗಂಟೆ 6.00ಕ್ಕೆ ಶ್ರೀ ದೇವರಿಗೆ ರಂಗಪೂಜೆ. ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನೆರವೇರಲಿರುವುದು ಎಂದರು.
ಮಾ.27ರ ಗುರುವಾರ ಸಂಜೆ 4ರಿಂದ ಭಜನೆ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಹಾಗೂ ಪಡು ಶ್ರೀ ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ ಸದಸ್ಯರಿಂದ ಅನೃತ್ಯ ವೈಭವ, ಹಾಸ್ಯ ಪ್ರಹಸನು, ಮಾ.28ರಂದು ಬೆಳಗ್ಗೆ 9ರಿಂದ ಭಜನಾ ಕಾರ್ಯಕ್ರಮ, ಸಂಜೆ .6ರಿಂದ 8ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಅಭಿನಯಿಸುವ ಕಾರ್ಯಕ್ರಮ ರಾತ್ರಿ ಗಂಟೆ 8.00ರಿಂದ ಲಕುಮಿ ತಂಡದ ಕುಸಾಲ್ವ ಕಲಾವಿದರು ಮಂಗಳೂರು ಇವರು “ಒರಿಯಾಂಡಲಾ ಸರಿ ಬೋಡು” – ತುಳು ಹಾಸ್ಯಮಯ ನಾಟಕ ನಡೆಯಲಿದೆ. ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ, ಪಡು ಭಟ್ರಕೋಡಿ, ಮಾ.29ರಂದು ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮ (ಸೇವಾಕರ್ತರು: ಶ್ರೀಮತಿ ಮತ್ತು ಶ್ರೀ ಬಿ. ಚಿತ್ತರಂಜನ್ ರೈ, “ಆಶ್ರಯ” ಪಡು) ಮಾ.30ರಂದು ಬೆಳಗ್ಗೆ ನಾನಾ ತಂಡಗಳಿಂದ ಭಜನೆ, ಮಧ್ಯಾಹ್ನ 2ರಿಂದ 4.30 ಶ್ರೀ ದುರ್ಗಾಂಭ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು, ಸುರತ್ಕಲ್ ಇವರಿಂದ ಯಕ್ಷಗಾನ ತಾಳಮದ್ದಲೆ “ಕದಂಬ ಕೌಶಿಕೆ”, ಸಂಜೆ 4.30ರಿಂದ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಅಸಂಗೀತ ಗಾನ ಸಂಭ್ರಮದ ಮಾ.30ರಂದು ಸಂಜೆ 6.30ರಿಂದ ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವರಿಂದ ಆತೆಲಿಕೆದ ಗೊಂಚಿಲ್ ನಾನ್ ಸ್ಟಾಪ್ ಕಾಮಿಡಿ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಭರತ್ ಶೆಟ್ಟಿ ವೈ,ಸುಪ್ರಿತ್ ರೈ,ತಾರನಾಥ ಭಟ್,ಕಿಶೋರ್ ಕುಮಾರ್,ಶರತ್ ಕುಮಾರ್,ಮೋಹನ್ ಶೆಟ್ಟಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.


