ಮಂಗಳೂರು : ಇತ್ತೀಚೆಗೆ ಬಸ್ ಹತ್ತುವ ವೇಳೆ ದೇರ್ಲಕಟ್ಟೆಯ ಮಹಿಳಾ ವಕೀಲೆ ಮೇಲೆ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಸಾಲಿಯಾನ್ ಮತ್ತು ಶಿವಕುಮಾರ್ ಬಂಧಿತರು. ಆಶೆಲ್ ಹೆಸರಿನ ರೂಟ್ ನಂ.19 ಬಸ್ ನ ಚಾಲಕ ಮತ್ತು ಕಂಡಕ್ಟರ್ ಇವರೇ. ದೇರ್ಲಕಟ್ಟೆಯ ಮಹಿಳೆ ಮುಫಿದಾ ರೆಹಮಾನ್ ಬಸ್ ಹತ್ತುತ್ತಿದ್ದಂತೆಯೇ ತರಾತುರಿಯಲ್ಲಿ ಬಸ್ ತೆರಳಿದ್ದು, ತನ್ನನ್ನು ಒಳಗೆ ಎಳೆದುಕೊಂಡ ಕಂಡಕ್ಟರ್ ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.