ಮಂಗಳೂರು ; ಜೀವನವೇ ಒಂದು ಪಾಠ ಯಾಕೆಂದರೆ ಮತ್ತೊಬ್ಬರ ಪ್ರಾಣ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್ ಎಂದು ತಿಳಿದುಬಂದಿದೆ.
ಲಿವರ್ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದ ಪತಿಯ ಸಂಬಂದಿಗೆ ಲಿವರ್ ಕಸಿಗೊಳಿಸುವ ಅಗತ್ಯವಿತ್ತು ಈ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಮಹಿಳೆಗೆ ಹಲವರು ದಾನಿಗಳು ಮುಂದಾದರು ರಕ್ತದ ಗುಂಪುವಿನಲ್ಲಿ ಹೊಂದಾಣಿಕೆಯಾಗಿರಲಿಲ್ಲ.ಮೃತ ಅರ್ಚನಾರ ಗುಂಪು ಹೊಂದಾಣಿಕೆಯಾದ ಹಿನ್ನೆಲೆ ಅವರೇ ಲಿವರ್ ಭಾಗದ ದಾನಕ್ಕೆ ಮುಂದಾಗಿದ್ದರು.ಅದರಂತೆ ಬೆಂಗಳೂರಿನಲ್ಲಿ೧೫ ದಿನಗಳ ಹಿಂದೆ ತನ್ನ ಲಿವರ್ ನ ಭಾಗವನ್ನು ಮಹಿಳೆಗೆ ಜೋಡಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರು ಆ ಬಳಿಕ ಅರ್ಚನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದು ಆರೋಗ್ಯವಾಗಿದ್ದರು .
ಕೆನರಾ ಕಾಲೇಜು ನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ಬೋಂದೆಲ್ ಬಳಿ ಇರುವ ಮಾಗ್ಲ್ ಶ್ರೀನಿವಾಸ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಆದರೆ ಕಳೆದ ನಾಲ್ಕು ದಿನಗಳಿಂದ ಅರ್ಚನಾ ಕಾಮತ್ ರವರು ತೀವ್ರ ಅಸ್ವಸ್ಥಗೊಂಡಿದ್ದು ಈ ಹಿನ್ನೆಲೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ .ಅವರು ಪತಿ ಹಾಗೂ ನಾಲ್ಕು ವರ್ಷದ ಮಗನನ್ನು ಅಗಲಿದ್ದಾರೆ .ಒಟ್ಟಿನಲ್ಲಿ ಗಾದೆಯ ಮಾತಿನಂತೆ ಈ ಕಲಿಯುಗದಲ್ಲಿ ಉಪಕಾರ ಮಾಡಿ ತನ್ನ ಜೀವಕ್ಕೆ ಅಪಕಾರ ಮಾಡಿದಂತೆ ಆಗಿದೆ ಈ ಸುದ್ದಿ.


