ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಉದ್ದಿಮೆ ಪರವಾನಿಗೆಗೆ ಸಂಬಂಧಪಟ್ಟ ಅಹವಾಲುಗಳನ್ನು ಸ್ವೀಕರಿಸಲು ಸಲುವಾಗಿ ಉದ್ದಿಮೆ ಪರವಾನಿಗೆ ಅದಾಲತ್ ನಡೆಯಿತು.
ಇಂದು ನಗರದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಲ್ಲಿ ಉದ್ದಿಮೆ ಪರವಾನಿಗೆ ಅದಾಲತ್ ನಡೆಸಲಾಯ್ತು. ಅದಾಲತ್‌ನಲ್ಲಿ ಹಲವಾರು ಮಂದಿಯ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಿ, ತಕ್ಷಣವೇ ಬಗೆಹರಿಸಿದರು. ಈ ವೇಳೆ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಪಾಲಿಕೆಗೆ ಮೊಟ್ಟ ಮೊದಲ ಬಾರಿಗೆ ವ್ಯಾಪಾರ ಪರವಾನಿಗೆ ಅದಾಲತ್ ನಡೆಸಲಾಗುತ್ತಿದೆ. ಪಾಲಿಕೆಯ ಅದಾಯ ಮೂಲವೇ ಟ್ರೇಡ್ ಲೈನ್ಸ್ ಆಗಿದೆ. ಇದರಿಂದಾಗಿ ಪಾಲಿಕೆಗೆ ಹೆಚ್ಚುವರಿ ಅದಾಯ ಬರುತ್ತದೆ. ಕೆಲವರು ಕೆಲವೊಂದು ಸಮಸ್ಯೆಗಳಿಂದ 10-15 ವರ್ಷಗಳಿಂದ ನವೀಕರಣ ಮಾಡದೇ ಇರುವುದರಿಂದ ಪಾಲಿಕೆಗೆ ದೊಡ್ಡ ಮಟ್ಟಿನ ಸಮಸ್ಯೆ ಆಗುತ್ತಿರುವ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ತತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವ ಸದುದ್ದೇಶದಿಂದ ಅದಾಲತ್ ನಡೆಸಲಾಗಿದೆ ಎಂದು ಹೇಳಿದರು.
ಇಂದು ಮಹಾನಗರಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಜರಗಿದ ವ್ಯಾಪಾರ ಪರವಾನಿಗೆ ಅಧಾಲತ್ ನಲ್ಲಿ ನವೀಕರಣದ ಒಟ್ಟು 91 ಅಜಿ೯ಗಳು ಬಂದಿದ್ದು ಎಲ್ಲವನ್ನು ಹಣ ಪಾವತಿಯ ನಂತರ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ, ಹೊಸ ಪರವಾನಿಗೆ ಗಾಗಿ ಸುಮಾರು 4 ಅಜಿ೯ಗಳನ್ನು ಸ್ವೀಕರಿಸಲಾಗಿದೆ. 02 ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗಿದೆ. ಒಟ್ಟು 97 ಅಜಿ೯ಗಳನ್ನು ಸ್ವೀಕರಿಸಲಾಗಿರುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದ್ದು ಇಲ್ಲಿ ಕೆಲವೇ ಕ್ಷಣದಲ್ಲಿ ವಿಲೇವಾರಿ ಮಾಡಲಾಗುವುದು, ಅದಾಲತ್ ಮುಖಾಂತರ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನ ನೀಡಲಾಗುತ್ತದೆ ಎಂದು ಮೇಯರ್ ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರ, ಜಗದೀಶ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು