ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತ ಸಿ ಎಲ್ ಆನಂದ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, 2.77 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಣ್ಣಗುಡ್ಡದಲ್ಲಿರುವ ಆಯುಕ್ತರ ಸರ್ಕಾರಿ ಬಂಗಲೆಗೆ ಆಗಮಿಸಿದ ಲೋಕಾಯುಕ್ತ ತಂಡ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿತು. ಬಳಿಕ ಆನಂದ್ ಅವರ ಕಚೇರಿಯಲ್ಲಿ ಹುಡುಕಾಟ ಮುಂದುವರಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಇಲಾಖೆಯಲ್ಲಿ ಹಸ್ತಕ್ಷೇಪ ಹಾಕುತ್ತಿದ್ದು ಎಲ್ಲಾ ಅಧಿಕಾರಿಗಳು ತಿಂಗಳಿಗೆ ಇಂತಿಷ್ಟು ಹಣ ಸಂಗ್ರಹಿಸಿ ಲಂಚಕೊಡುವಂತೆ ಎಲ್ಲಾ ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದು ಈ ಬಗ್ಗೆ ಸುಳಿವು ತಿಳಿದ ವ್ಯಕ್ತಿ ಆನಂದ್ ವಿರುದ್ಧ ಲೋಕಾಯುಕ್ತ ವಿರುದ್ಧ ದೂರು ನೀಡಿದ್ದರು ಹಾಗೂ ಮಂಗಳೂರಿನ ಪ್ರಖ್ಯಾತ ಬಿಲ್ದರ್ ಗೆ ಲಂಚದ ಬೇಡಿಕೆ ಇಟ್ಟ ಕಾರಣ ರಾಜಕೀಯ ಅಧಿಕಾರ ಉಪಯೋಗಿಸಿ ವರ್ಗಾವಣೆ ಮಾಡಿದ್ದರು. ಆನಂದ್ ಅವರು ಜೂನ್ 28, 2023 ರಂದು MCC ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಜುಲೈ 4, 2024 ರಂದು ಸರ್ಕಾರವು ಅವರಿಗೆ ನಿರ್ದಿಷ್ಟ ಸ್ಥಾನವನ್ನು ನೀಡದೆ ವರ್ಗಾವಣೆ ಆದೇಶವನ್ನು ಹೊರಡಿಸಿತು. ಆನಂದ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಗೆ ಮೇಲ್ಮನವಿ ಸಲ್ಲಿಸಿ, ವರ್ಗಾವಣೆ ಆದೇಶ ಅವಧಿಪೂರ್ವ ಎಂದು ವಾದಿಸಿದರು. ಕೆಎಟಿ ನಂತರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಎಂಸಿಸಿಯ ಕಮಿಷನರ್ ಆಗಿ ಉಳಿಯಲು ಅವಕಾಶ ನೀಡಿತು.
ಆನಂದ್ಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ವಿವಿಧೆಡೆ ಆಸ್ತಿ ಪತ್ತೆಯಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ 2.77 ಕೋಟಿ ರೂ., ಮೂರು ಮನೆ, ನಾಲ್ಕು ಎಕರೆ ಕೃಷಿ ಭೂಮಿ, 2.12 ಕೋಟಿ ಮೌಲ್ಯದ ಸ್ಥಿರಾಸ್ತಿ, 19.4 ಲಕ್ಷ ಮೌಲ್ಯದ ಚಿನ್ನಾಭರಣ, 20.5 ಲಕ್ಷ ಮೌಲ್ಯದ ವಾಹನ, ಆಸ್ತಿ ಖರೀದಿಗೆ ಮುಂಗಡವಾಗಿ 10 ಲಕ್ಷ ರೂ. ಮತ್ತು ಅವರ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ರೂ. ಖಾತೆಯಲ್ಲಿದೆ ಎಂದು ತಿಳಿದಿದೆ.


