ಮಂಗಳೂರು : ಸಂತ ಜೆರೋಸಾ ಶಾಲೆಯ ಶಿಕ್ಷಕಿ ಪ್ರಭಾ ಹಿಂದೂ ಧರ್ಮದ ದೇವರುಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಹೇಳನಾ ಮಾಡಿದುದ್ದಲ್ಲದೆ ಪ್ರತಿಭಟನೆಯ ನಂತರ ತಪ್ಪು ಒಪ್ಪಿಕೊಂಡ ಜೆರೋಸಾ ಶಾಲೆಯ ಆಡಳಿತ ಮಂಡಳಿ ಇದೀಗ ಮಂಗಳೂರು ಧರ್ಮಪ್ರಾಂತ್ಯ ಶಿಕ್ಷಕಿಯ ಮೇಲೆ ಸುಳ್ಳು ಆರೋಪಿಸಲಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ ನಂತರ ಶಾಲೆಯ ಆಡಳಿತ ಯು ಟರ್ನ್ ಹೊಡೆದಿದೆ,ಇದೀಗ ರಾಜಕೀಯ ತಿರುವುಪಡೆದುಕೊಂಡಿದ್ದು ಸೇಡಿಗೆ ಸಹಸೇಡಿನಂತಾಗಿದೆ ಜಿಲ್ಲೆಯ ಪರಿಸ್ಥಿತಿ.
ಈ ಘಟನೆಯ ಬಗ್ಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು ಆದರೆ ಮೊದಲ ಬಾರಿಗೆ ತಪ್ಪೊಪ್ಪಿಕೊಂಡ ಶಾಲೆಯ ಆಡಳಿತ ರಾಜಕೀಯ ಹಾಗೂ ಧರ್ಮಪ್ರಾಂತೀಯ ಧಾಳಕ್ಕೆ ಮರುಗಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿF.I.R ದಾಖಲಾಗಿತ್ತು.ಈ ಬಗ್ಗೆ ಹೆಚ್ಚೆತ್ತ ಹಿಂದೂ ಸಂಘಟನೆ ಬಿಜೆಪಿ ನಾಯಕರ ವಿರುದ್ಧ ಎಫ್ಐಅರ್ ಖಂಡಿಸಿ ಫೆಬ್ರವರಿ 19 ರಂದು ಮಂಗಳೂರು ನಗರದ ಎಲ್ಲಾ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಹರತಾಳಕ್ಕೆ ವಿಹೆಚ್ಪಿ ಕರೆ ನೀಡಿದೆ.
ಸಂತ ಜೆರೋಸಾ ಶಾಲೆಯ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ನ್ಯಾಯಸಿಗಳೆಂದು ಆದರೆ ಇದೀಗ ಪ್ರತಿಭಟನೆ ಮಾಡಿದವರ ಮೇಲೆ FIR ದಾಖಲಿಸಿದ್ದು ಖಂಡನೀಯ ಈ ಘಟನೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ವಿಹೆಚ್ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದ್ದಾರೆ .
ಜೈ ಶ್ರೀರಾಮ್ ಹೇಳಿದಕ್ಕೆ ಹಿಂದೂ ವಿರೋಧಿ ಸರ್ಕಾರ ಕೇಸ್ ಹಾಕಿದೆ. ಹಿಂದೂ ಸಮಾಜದ ಬಂಧುಗಳು ಪೊಲೀಸ್ ಠಾಣೆಗಳ ಮುಂದೆ ಜೈ ಶ್ರೀರಾಮ್ ಘೋಷಣೆಯ ಜೊತೆ ಧರಣಿ ಮಾಡುತ್ತೇವೆ.ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ಮಾಡುತ್ತೇವೆ.ವಿಶೇಷವಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ಹೇಳಿದ ಅವರು ಎಫ್ಐಆರ್ ದಾಖಲಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷಕಿ ಪ್ರಭಾ ಹಿಂದೂ ಸಮಾಜಕ್ಕೆ ಅವಹೇಳನ ಮಾಡಿದ್ದಾರೆ, ಅವರ ಮೇಲೆ ಕ್ರಮ ತೆಗೆಯಲು ಈ ನೀಚ ಸರಕಾರಕ್ಕೆ ಧೈರ್ಯವಿಲ್ಲ,ರಾಮ ದೇವರು, ನಾಗದೇವರು, ಕೊರಗಜ್ಜನ ಬಗ್ಗೆ ಅವಹೇಳನ ಮಾಡಿದ್ದಾರೆ. ಇದರ ವಿರುದ್ಧ ಪೋಷಕರು ಪೊಲೀಸ್ ದೂರು ನೀಡಿದರೂ ಇನ್ನು ಪ್ರಕರಣ ದಾಖಲಿಸಿಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರು ಕ್ರೈಸ್ತ ಧರ್ಮಪ್ರಾಂತ್ಯದ ಮಾತಿಗೆ ಬೆಲೆಕೊಟ್ಟು ಗ್ರಹಸಚಿವರಿಗೆ ಒತ್ತಡ ಹಾಕಿದ್ದು ಶರಣ್ ಪಂಪುವೆಲ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಬಗ್ಗೆ ಪ್ರಶ್ನಿಸಿದರೆ ಮೇಲಿನಿಂದ ಒತ್ತಡ ಇದೆ ಎಂದು ಪೊಲೀಸರು ಹೇಳುತ್ತಿರುವುದಾಗಿ ತಿಳಿಸಿದರು. ಅಲ್ಲದೆ ನಮ್ಮ ನಾಯಕರ ಮೇಲೆ ಹಾಕಿರುವ ಕೇಸು ವಾಪಾಸು ಪಡೆಯಬೇಕು. ಶಿಕ್ಷಕಿ ಪ್ರಭಾ ಮೇಲೆ ಕೇಸು ದಾಖಲಿಸಿ ಬಂಧಿಸಬೇಕು ಎಂದು ಶಿವಾನಂದ ಮೆಂಡನ್ ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ, ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 153A, 295A, 505(2), 506, 149 ಅಡಿ ಪ್ರಕರಣ ದಾಖಲಾಗಿತ್ತು.