Wednesday, November 5, 2025
Flats for sale
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಭಯಾನಕ 'ಚಡ್ಡಿ ಗ್ಯಾಂಗ್' ಕಳ್ಳರ ಎಂಟ್ರಿ : ಹೆಚ್ಚರದಿಂದ ಇರುವಂತೆ ಪೊಲೀಸರ...

ಮಂಗಳೂರು : ಮಂಗಳೂರಿನಲ್ಲಿ ಭಯಾನಕ ‘ಚಡ್ಡಿ ಗ್ಯಾಂಗ್’ ಕಳ್ಳರ ಎಂಟ್ರಿ : ಹೆಚ್ಚರದಿಂದ ಇರುವಂತೆ ಪೊಲೀಸರ ಸೂಚನೆ.

ಮಂಗಳೂರು : ನಿನ್ನೆ ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಡಿಕಲ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ದುಷ್ಕರ್ಮಿಗಳು ನಿವಾಸಿಗಳು ಮಲಗಿದ್ದ ಕೊಠಡಿಯ ಕಿಟಕಿ ಗ್ರಿಲ್ ಕಟ್ ಮಾಡಿ ಮನೆಗೆ ನುಗ್ಗಲು ಯತ್ನಿಸಿದ್ದಾರೆ.

ಸಾರ್ವಜನಿಕರು ಜಾಗೃತರಾಗಿರಲು ಪೊಲೀಸರು ಮನವಿ ಮಾಡಿದ್ದಾರೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಪ್ರದೇಶದಲ್ಲಿ ಅಥವಾ ಸಮೀಪದಲ್ಲಿ ಕಂಡುಬಂದರೆ, ನಿವಾಸಿಗಳು ಪೊಲೀಸ್ ನಿಯಂತ್ರಣ ಕೊಠಡಿಗೆ 9480802321 ಅಥವಾ 112 ಗೆ ಕರೆ ಮಾಡಲು ಕೋರಲಾಗಿದೆ.

ಮನೆಗಳು ಮತ್ತು ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸರು ನಿವಾಸಿಗಳಿಗೆ ಸಲಹೆ ನೀಡಿದ್ದು , ಬೆಳಗಿನ ಜಾವ ಎಲ್ಲ ಪ್ರದೇಶಗಳ ರಸ್ತೆಗಳಿಗೆ ಬಂದು ತಪ್ಪಿಸುವ ಹಾದಿಯನ್ನು ತಿಳಿದು ನಕ್ಷೆಯನ್ನು ತಯಾರುಮಾಡುತ್ತಾರೆ. ನಗರ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಜನಸಾಮನ್ಯರು ಉತ್ತಮ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಆಯುಕ್ತರು ಮನವಿಮಾಡಿದ್ದಾರೆ.

ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗಿನ 7:00 ಗಂಟೆಯ ನಡುವೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ವಿವೇಕಾನಂದ ನಗರ ವಾಸಿ ಪ್ರದೀಪ್ ರವರ ಮನೆಯ ಬೆಡ್ ರೂಮಿನ ಕಿಟಕಿಯ ಸರಳನ್ನು ಕಿತ್ತು ಒಳಬಂದ ಕಳ್ಳರು ರೂಮಿನಲ್ಲಿದ್ದ ಗಾಡ್ರೆಜ್ ಕಪಾಟಿನಲ್ಲಿ ಇಟ್ಟಿದ್ದ ರೂ 10,000 ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಮೊ ಸಂ 68/2024 ಕಲಂ 331 (4), 305 ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ.

ದಂಡುಪಾಳ್ಯ ಗ್ಯಾಂಗ್ ತರಹ ಇವರ ಕೃತ್ಯ ವಿದ್ದು ಇವರು ಹಣ ಚಿನ್ನಕ್ಕಾಗಿ ಹತ್ಯೆಮಾಡುವುದರಲ್ಲಿ ನಿಸ್ಸಿಮರೆಂದು ತಿಳಿದುಬಂದಿದೆ.ಅದರಿಂದ ಪೊಲೀಸ್ ಇಲಾಖೆ ಆದಷ್ಟು ಹೆಚ್ಚರಿಕೆಯಿಂದ ಇರಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular