ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ ಬೃಹತ್ ಮಾರಾಟ ಮೇಳ” ಇಂದು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್ಲ್ಯಾಂಡ್ಸ್ ನಲ್ಲಿ ಆರಂಭಗೊಂಡಿತು.ಈ ಮೇಳವನ್ನು ಖ್ಯಾತ ಲೇಖಕ ತುಳು ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಲ್ ಬೈಲ್ ಉದ್ಘಾಟಿಸಿದರು.


ಬಳಿಕ ಉಧ್ಘಾಟಿಸಿ ಮಾತನಾಡಿದ ಅವರು ಬಾರತ ವಿವಿಧತೆಯಲ್ಲಿ ಏಕತೆ ಸಾರುವಂತಹ ರಾಷ್ಟ್ರ,ಆದರಿಂದ ಬೆರೆ ಬೆರೆ ವಿಭಿನ್ನತೆಯನ್ನು ಹೊಂದಿದೆ ,ನಮ್ಮ ಉಡುಪುಗಳನ್ನು ಮರೆಯದೆ ಬೇರೆ ರಾಜ್ಯದ ಉಡುಪುಗಳಿಗೆ ಆಧ್ಯತೆ ನೀಡಿ ಎಂದು ವಿಜಯ್ ಕುಮಾರ್ ಕೊಡಿಯಲ್ ಬೈಲ್ ರವರು ಹೇಳಿದರು.
ಮುಖ್ಯ ಅಥಿತಿಗಳಾಗಿ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಟ ರಂಗ ತ್ರಿವಿಕ್ರಮ ಬಿರುದಾಂಕಿತ ಶ್ರೀ ಸಾಯಿ ಕೃಷ್ಣ ಕುಡ್ಡಹಾಗೂ “Miss TeenWorld Super Model Global” ವಿಜೇತೆ ಚಿತ್ರನಟಿ ಕುಮಾರಿ ವೆನ್ಸಿಟಾ ಡೈಸ್ ರವರು ಭಾಗವಹಿಸಿದ್ದು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮೇಳದ ಬಗ್ಗೆ ಮಾಹಿತಿ ನೀಡಿದ ಮೇಳದ ಅಯೋಜಕರಾದ ಶ್ರೀ ಪ್ರಮೋದ್ ಸಿಂಗ್ ಅವರು, ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬಪುರಿ ಇತ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಪೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್ಗಳು, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಮಾನ್ ಬೆಡ್ಶೀಟ್ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು ಎಂದು ಹೇಳಿದರು.
ಮಾತ್ರವಲ್ಲದೇ ಜೋಧುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ಗಳ ಬೃಹತ್ ಸಂಗ್ರಹಗಳಿವೆ ಎಂದು ಶ್ರೀ ಪ್ರಮೋದ್ ಸಿಂಗ್ ತಿಳಿಸಿದರು.


