Wednesday, December 3, 2025
Flats for sale
Homeಜಿಲ್ಲೆಮಂಗಳೂರು : ಭ್ರಷ್ಟಾಚಾರ ಆರೋಪಿ ದ.ಕ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಗಿರೀಶ್ ಮೋಹನ್ ಮತ್ತೆ ಕೇವಿಯೆಟ್‌ಗೆ...

ಮಂಗಳೂರು : ಭ್ರಷ್ಟಾಚಾರ ಆರೋಪಿ ದ.ಕ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಗಿರೀಶ್ ಮೋಹನ್ ಮತ್ತೆ ಕೇವಿಯೆಟ್‌ಗೆ : ಸರ್ಕಾರಕ್ಕೆ ಸವಾಲು, ಸಾರ್ವಜನಿಕರ ಆಕ್ರೋಶ.

ಮಂಗಳೂರು : ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು, ಇಲಾಖಾ ವಿಚಾರಣೆಯಲ್ಲಿ ದುರ್ನಡತೆ ಸಾಬೀತಾಗಿ ಕಡ್ಡಾಯ ನಿವೃತ್ತಿ ಶಿಕ್ಷೆ ಎದುರಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಸ್.ಎನ್. ಗಿರೀಶ್ ಮೋಹನ್ ಅವರು ಮತ್ತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೇವಿಯೆಟ್) ಮೆಟ್ಟಿಲೇರಿದ್ದಾರೆ. ಇಲಾಖೆಯಿಂದ ಹೊರಡಿಸಲಾಗಿರುವ ಕಾರವಾರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ತಮ್ಮನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆಯೇ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಎದುರಿಸಿ ನಂತರ ಕೇವಿಯೆಟ್‌ನಲ್ಲಿ ಗೆದ್ದು ಸೇವೆಗೆ ಮರಳಿದ್ದ ಈ ಅಧಿಕಾರಿ ಇದೀಗ ಮತ್ತೊಮ್ಮೆ ಅದೇ ಕಾನೂನು ದಾರಿ ಹಿಡಿದಿರುವುದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಕರಣಗಳ ಸಾಲು
*19.03.2013 ಪ್ರಕರಣ ಲಂಚ ಸ್ವೀಕರಿಸುತ್ತಿದ್ದ ಸ್ಥಳದಲ್ಲೇ ಟ್ರ್ಯಾಪ್ ಉಡುಪಿ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿ 18.04.2016ರಂದು ಲೋಕಾಯುಕ್ತ ತನಿಖಾ ವರದಿ ದುರ್ನಡತೆ ಸಾಬೀತು.

22.03.2018* ಸರ್ಕಾರದ ಆದೇಶ (CI 59 MGS 2014) ಮೂಲಕ ಕಡ್ಡಾಯ ನಿವೃತ್ತಿ ಅದೇಶ.

10.07.2019*: ಕೇವಿಯೆಟ್‌ನಲ್ಲಿ (ಅರ್ಜಿ ಸಂಖ್ಯೆ 2684/2018) ಗೆದ್ದು ನಿವೃತ್ತಿ ಆದೇಶ ರದ್ದು, ಮತ್ತೆ ಸೇವೆಗೆ ಸೇರ್ಪಡೆ ಪ್ರಕರಣ ಸರಕಾರಕ್ಕೆ ಮುಖಭಂಗ ಮಾಡಿಸಿತ್ತು.

29.11.2019* ಮೈಸೂರು ನಿಯುಕ್ತಿ, ನಂತರ ಸರಕಾರದ ಅದೇಶ ವಿರುದ್ಧ ತೊಡೆ ತಟ್ಟೆ ಮಂಗಳೂರು-ದಕ್ಷಿಣ ಕನ್ನಡದಲ್ಲಿ ಕಾರ್ಯನಿರ್ವಹಣೆ ಮುಂದುವರಿಸಿದ್ದರು.

ಸೇವಾ ನಿಯಮಗಳ ತೀವ್ರ ಉಲ್ಲಂಘನೆಯ ಪ್ರಶ್ನೆ

ಕರ್ನಾಟಕ ಸಿವಿಲ್ ಸರ್ವಿಸಸ್ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲ್) ನಿಯಮಗಳು 1957ರ ನಿಯಮ 10, 11 ಮತ್ತು 14 ರ ಪ್ರಕಾರ, ಭ್ರಷ್ಟಾಚಾರ ಅಥವಾ ಶಿಸ್ತು ಕ್ರಮ ತನಿಖೆ ಎದುರಿಸುತ್ತಿರುವ ಅಧಿಕಾರಿಗಳಿಗೆ ಪ್ರಮುಖ ಹುದ್ದೆ, ಮುಖ್ಯ ಹುದ್ದೆ ಅಥವಾ ಜನ ಸಂಪರ್ಕ ಹುದ್ದೆ ನೀಡುವುದು ಸಂಪೂರ್ಣ ಕಾನೂನುಬಾಹಿರ.

ಆದರೂ ಗಿರೀಶ್ ಮೋಹನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿರುವುದು ಕಾನೂನು ತಜ್ಞರನ್ನು ಆಶ್ಚರ್ಯಕ್ಕೀಡು ಮಾಡಿದೆ.

*ರಾಜಕೀಯ ರಕ್ಷಣೆ” ಎಂಬ ಆರೋಪ“ದಕ್ಷಿಣ ಕನ್ನಡದಲ್ಲಿ ಅಧಿಕಾರದಲ್ಲಿರುವ ಪ್ರಮುಖ ರಾಜಕೀಯ ನಾಯಕನ ಆಪ್ತ ಸಹಾಯಕನ ರಕ್ಷಣೆಯಿಂದಲೇ ಈ ಅಧಿಕಾರಿಗೆ ಎಲ್ಲ ರೀತಿಯ ರಿಯಾಯಿತಿಗಳು ಸಿಗುತ್ತಿವೆ ಅನ್ನುವ ಆರೋಪಗಳು ಕೇಳಿ ಬರುತ್ತಿವೆ.

ಜಿಲ್ಲಾಧಿಕಾರಿಗಳು ಸಹ ಈ ವಿಷಯದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ರಾಜ್ಯದ ಪ್ರಧಾನ ಕಾರ್ಯದರ್ಶಿ (ಗಣಿ ಮತ್ತು ಭೂವಿಜ್ಞಾನ) ಶ್ರೀಮತಿ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲು ಮುಂದಾಗಿದ್ದಾರೆ.

ಬುದ್ಧಿವಂತರ ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿ ಮುಂದುವರೆಸಲು ವ್ಯಾಪಕ ಆಕ್ರೋಶ ಒಮ್ಮೆ ಲಂಚ ಪಡೆದು ಸಿಕ್ಕಿಬಿದ್ದ ಅಧಿಕಾರಿಗೆ ಮತ್ತೆ ಪ್ರಮುಖ ಹುದ್ದೆ ನೀಡಿ, ಈಗ ವರ್ಗಾವಣೆಯನ್ನೂ ತಡೆಯಲು ಮುಂದಾಗುತ್ತಿರುವ ಅಧಿಕಾರಿಯ ನಡೆ ಇಡಿ ಬುದ್ಧಿವಂತರ , ವಿನಯತೆಯುಳ್ಳ ದಕ್ಷಿಣ ಕನ್ನಡ ದ ಜನತೆಗೆ ಅವಮಾನವಾಗಿದೆ. ಸರಕಾರವನ್ನೇ ಆಗಾಗ ಮುಖಭಂಗಕ್ಕೀಡು ಮಾಡುವ ಇಂತಹ ಅಧಿಕಾರಿ ಮಂಗಳೂರಿನಲ್ಲೇ ಉಳಿಯಲು ಕಾರಣವಾದರೂ ಏನು? ಅಷ್ಟು ಲಾಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೆಯಾ ಅನ್ನುವ ಪ್ರಶ್ನೆ ಇಡೀ ಸಾರ್ವಜನಿಕ ವಲಯದಲ್ಲಿ ಕೇಳುತ್ತಿರುವ ಪ್ರಶ್ನೆಯಾಗಿದೆ. ಆಗಾಗ ನ್ಯಾಯಾಲಯದ ಮೆಟ್ಟಿಲೇರಿ ಕಾನೂನಿನ ದುರುಪಯೋಗ ನಡೆಸುತ್ತಿರುವ ಆರೋಪವೂ ಇದೆ. ಅಡಳಿತ ಪಕ್ಷದ ಕಾರ್ಯಕರ್ತರೊಬ್ಬರ ಅಭಿಪ್ರಾಯದಂತೆ “ಇಂತಹ ದಾಖಲೆ ಇರುವವರಿಗೆ ಹುದ್ದೆ ನೀಡುವುದೇ ಸರ್ಕಾರದ ನೈತಿಕತೆಗೆ ಪ್ರಶ್ನೆಯಾಗಿದೆ. ಭ್ರಷ್ಟಾಚಾರ ವಿರುದ್ಧ ಘೋಷಣೆ ಮಾಡುವ ಸರ್ಕಾರ ಒಂದೆಡೆ, ಇನ್ನೊಂದೆಡೆ ಇಂತಹ ಅಧಿಕಾರಿಗಳಿಗೆ ರಕ್ಷಣೆ ಕೊಡುತ್ತಿರುವುದು ಇನ್ನೊಂದು ಕಡೆ.

ದ.ಕ ಜಿಲ್ಲೆಯಲ್ಲಿ ಕಾನೂನು ಎಲ್ಲರಿಗೂ ಸಮಾನವೇ?

ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆ ಘೋಷಿಸಿರುವ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ, ಸೇವಾ ನಿಯಮಗಳು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯಲಿವೆ, ಲೋಕಾಯುಕ್ತ ತನಿಖೆಗಳು ಕಾಗದದ ದಾಖಲೆಗಳಾಗಿ ಮಾರ್ಪಾಡಾಗಲಿದೆ. ಇದರಿಂದಾಗಿ ಸರಕಾರದ ಮೇಲಿನ ಸಾರ್ವಜನಿಕ ನಂಬಿಕೆಗಳು ಕುಸಿಯುತ್ತದೆ.

ಗಿರೀಶ್ ಮೋಹನ್ ಅವರ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ವೈಯಕ್ತಿಕ ಹೋರಾಟವಲ್ಲ. ಇದು ರಾಜ್ಯದ ಆಡಳಿತ ಶಿಸ್ತು, ಪಾರದರ್ಶಕತೆ ಮತ್ತು ಕಾನೂನಿನ ಆಳ್ವಿಕೆಯೇ ಪ್ರಶ್ನೆಯ ವಿಚಾರ ಆಗಿದೆ. ಭ್ರಷ್ಟಾಚಾರ ಸಾಬೀತಾದವರಿಗೆ ಶಿಕ್ಷೆಯೇ ಇಲ್ಲವೇ? ಕಾನೂನು ಎಲ್ಲರಿಗೂ ಸಮಾನ ಅಲ್ಲವೇ ? ಸರ್ಕಾರ ಸಾರ್ವಜನಿಕ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ನೀಡಬೇಕಾದ ದಿನಗಳು ಎದುರಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular