Friday, March 13, 2026
Flats for sale
Homeಜಿಲ್ಲೆಮಂಗಳೂರು ; ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದು ಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ರವರಿಗೆ...

ಮಂಗಳೂರು ; ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದು ಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ರವರಿಗೆ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಪ್ರಶಸ್ತಿ ಪ್ರದಾನ..!

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬ್ರಿಡ್ಜ್ ಮ್ಯಾನ್ ಎಂದೆ ಖ್ಯಾತಿ ಪಡೆದಿರುವ ಗಿರೀಶ್ ಭಾರದ್ವಜ್ ರವರಿಗೆ ಇಂದು ದ.ಕ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ವತಿಯಿಂದ ಪ್ರೆಸ್ ಕ್ಲಬ್ ಗೌರವ ಅತಿಥಿ ಪ್ರಶಸ್ತಿ ನೀಡಿ ಗೌರವಿಸಿದರು.

ಗಿರೀಶ್ ಭಾರದ್ವಾಜ್ ಭಾರತದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ 142 ಕ್ಕಿಂತ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ ಸಮಾಜಸೇವಕ. ಇದಕ್ಕಾಗಿ ಅವರಿಗೆ ಸೇತು ಬಂಧು ಮತ್ತು ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ ಎಂದು ಹೆಸರು ಬಂದಿದೆ. ಅವರಿಗೆ 2017ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾಲಬುಡಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬರುವ ವಿಪುಲ ಅವಕಾಶ ಇದ್ದರೂ ಆತ್ಮತೃಪ್ತಿಗೆ ಮಾಡಿದ ಕೆಲಸಕ್ಕೆ ದ್ರೋಹ ಬಗೆಯದೇ ನಿಸ್ವಾರ್ಥವಾಗಿ ಸೇವೆ ಮಾಡಿದ ದೇಶದ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ಸುಳ್ಯದ ಗಿರೀಶ್ ಭಾರದ್ವಾಜ್ ಅವರು ಯುವ ಜನರಿಗೆ ಆದರ್ಶರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು ಸಮೀಪದ ಇಡ್ಯಡ್ಕ ಭಾರದ್ವಾಜಾಶ್ರಮ ನಿವಾಸಿಯಾಗಿರುವ ಬಲೆಕ್ಕಳ ಗಿರೀಶ್ ಭಾರದ್ವಾಜ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. 1975ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಶಿಲ್ಪ ಎಂಬ ಎಂಜಿನಿಯರಿಂಗ್ ವರ್ಕ್ ಶಾಪ್ ತೆರೆದು ಕಾರ್ಯನಿರ್ವಹಿಸುತ್ತಿದ್ದ ಅವರು ಹಂತ ಹಂತವಾಗಿ ಸಾಧನೆ ಮಾಡಿ ಕ್ರಮೇಣ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧಿಗೆ ಬಂದಿದ್ದರು.

1989ರಲ್ಲಿ ಸುಳ್ಯದ ಅರಂಬೂರು ಸಮೀಪದಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಊರವರ ಸಹಕಾರದಿಂದ ಮೊದಲ ತೂಗು ಸೇತುವೆ ನಿರ್ಮಿಸಿದ ಅವರು ಮುಂದೆ ತೂಗು ಸೇತುವೆ ನಿರ್ಮಾಣವನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿ ದೇಶಾದ್ಯಂತ 142 ಯೋಜನೆಗಳನ್ನು ಕಾರ್ಯಗತಗೊಳಿಸಿ ಎರಡು ಊರುಗಳನ್ನು ಬೆಸೆಯುವ ಕೆಲಸ ಮಾಡಿ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತಿ ಪಡೆದಿದ್ದಾರೆ.

ಸಂಪರ್ಕ ಇಲ್ಲದ ಊರಿನಲ್ಲಿ ಎರಡು ಊರುಗಳನ್ನು ಒಂದಾಗಿಸಿದ ಭಾರದ್ವಾಜ್ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಯತ್ನದಲ್ಲಿ ಅರಂಬೂರಿನಲ್ಲಿ ತೂಗು ಸೇತುವೆ ನಿರ್ಮಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದ ಅವರು ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಆಂಧ್ರಪ್ರದೇಶ,ಒಡಿಶಾ ಕೇರಳ, ಕರ್ನಾಟಕ ಸೇರಿದಂತೆ ಹಲವೆಡೆ ತೂಗುಸೇತುವೆಗಳನ್ನು ಗಿರೀಶ್ ಭಾರಧ್ವಜ್ ನಿರ್ಮಿಸಿದ್ದಾರೆ.ಈ ಬಗ್ಗೆ ಗಿರೀಶ್ ಭಾರಧ್ವಜ್ ರವರು ತಮ್ಮ ಜೀವನದಲ್ಲಿ ನಡೆದುಬಂದ ಹಾದಿಯ ಬಗ್ಗೆ ಹಾಗೂ ಸುಳ್ಯದಿಂದ ನಡೆದು ಬಂದ ಹಾದಿಯನ್ನು ಪತ್ರಕರ್ತರ ಜೊತೆ ನಡೆದ ಸಂವಾದದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಉದ್ಘಾಟಿಸಿದರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ ರೈ,ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ರಾಮಕೃಷ್ಣ ಆರ್,ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ,ಆರ್ ಸಿ ಭಟ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular