ಮಂಗಳೂರು : ಕಳೆದ ಜುಲೈ 30ರಂದು ಮಂಗಳೂರು ನಗರದ ಬಿಜೈಯ ಮನೆಯಿಂದ ನಾಪತ್ತೆಯಾಗಿದ್ದ 18ವರ್ಷದ Calista Ferrao ಎಂಬ ಹುಡುಗಿ ಇದೀಗ ಕಾರ್ಕಳ ಮೂಲದ ಯುವಕನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಮನೆಯಲ್ಲಿ ಯಾರಿಗೂ ತಿಳಿಸದೆ ಹೋಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು .
ಈ ಪ್ರಕರಣದ ತನಿಖೆಗಿಳಿದ ಪೋಲಿಸರು ಆಕೆ ಬಳಸುತ್ತಿದ್ದ ಇನ್ಸ್ಟಾಗ್ರಾಮ್ ಅಕೌಂಟ್ ಮತ್ತು Moj ಆ್ಯಪ್ ಗಳ ಅಕೌಂಟ್ ಪರಿಶೀಲಿಸಿದಾಗ ನಾಪತ್ತೆಗೆ ಕಾರಣ ಬಯಲಾಗಿದೆ. ಬರ್ಕೆ ಪೊಲೀಸ್ ಇನ್ಸ್ಪೆಕ್ಟರ್ ತಂಡ CC TV ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಕಾಣೆಯಾದ ಹುಡುಗಿ ಈ ಹಿಂದೆ social media ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಸುಮಾರು 3000 instagraam account ಮತ್ತು moja App ನ account ಗಳನ್ನು ಪರಿಶೀಲಿಸಿ ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ಸಂದರ್ಭದಲ್ಲಿ ಸೂರಜ್ ಪೂಜಾರಿ ಎಂಬ 23 ವರ್ಷದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು ಎನ್ನಲಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕು,ಗಜೇಂದ್ರ ಬೈಲ್ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದಾಗ ಹುಡುಗನೊಂದಿಗೆ ಆತನ ಮನೆಯಲ್ಲಿ ಕಾಣೆಯಾದ ಹುಡುಗಿ ಪತ್ತೆಯಾಗಿದ್ದಾಳೆ, ಅವರನ್ನು ಬರ್ಕೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾಗ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಿಲ್ಲದಿರುವುದು ವಿಚಾರಣಾಧಿಕಾರಿಯ ಗಮನಕ್ಕೆ ಬಂದಿದ್ದು ಸದ್ಯಕ್ಕೆ ಹೆತ್ತವರ ಜೊತೆ ಜೊತೆ ಹೋಗುವುದಿಲ್ಲ ಎಂದು ತಿಳಿಸಿದ ಕಾರಣ ಸ್ವಾದಾರ ಕೇಂದ್ರಕ್ಕೆ ಕಳುಹಿಸಲಾಗಿದೆ.