ಮಂಗಳೂರು ; ಯೂತ್ ಬಂಟ್ಸ್ ಮಂಗಳೂರು ನೇತೃತ್ವದಲ್ಲಿ ಫೆ. 7. 8 ಮತ್ತು 9ರಂದು ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಪಂದ್ಯಾಟಗಳು ನಡೆಯಲಿದ್ದು ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳನ್ನು ಯುವ ಸಂಘಟಕ ರಾದ ಸಚಿನ್ ರಾಜ್ ರೈ ಹಾಗೂ ಯುವ ಉದ್ಯಮಿ ಪ್ರಸಾದ್ ಶೆಟ್ಟಿ ಆಯೋಜಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪಂದ್ಯಾಟದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿದ್ದು, ತಂಡಗಳ ವಿವರ ಹೀಗಿದೆ:
ತುಳುನಾಡು ಬೈಗರ್ಸ್ (ಮಾಲೀಕರು: ರಕ್ಷಿತ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ), ಲೆಜೆಂಟ್ ಬಂಟ್ಸ್ (ಮಾಲೀಕರು: ಮಿಥುನ್ ರೈ ಸಹ ಮಾಲೀಕರು: ಪ್ರವೀಣ್ ಚಂದ್ರ ಆಳ್ವ ಮತ್ತು ನಿತಿನ್ ಶೆಟ್ಟಿ). ಎಜೆ ರಾಯಲ್ಸ್ (ಮಾಲೀಕರು: ಪ್ರಶಾಂತ್ ಶೆಟ್ಟಿ). ಮೇಲಾಂಟ ಮಾವೆರಿಕ್ಸ್ (ಮಾಲೀಕರು: ಹರ್ಷ ಮೇಲಾಂಬ, ಸಹ ಮಾಲೀಕರು: ಆಶಿಶ್ ಶೆಟ್ಟಿ ಮತ್ತು ಧೀರಣ್ ಶೆಟ್ಟಿ). ಅಡ್ವಾರ್ ರಾಯಲ್ ಕಿಂಗ್ (ಮಾಲೀಕರು: ಕಿಶನ್ ಶೆಟ್ಟಿ). ಕುಡ್ಲ ಸೂಪರ್ ಕಿಂಗ್ಸ್ (ಮಾಲೀಕರು: ಸಂಪತ್ ಶೆಟ್ಟಿ, ಧೀರಣ್ ಶೆಟ್ಟಿ), ವಿಕ್ರಂ ವಾರಿಯರ್ಸ್ (ಮಾಲೀಕರು: ಮಹೇಶ್ ವಿಕ್ರಮ್ ಹೆಗ್ಡೆ), ರಾಯಲ್ ಸುರಗಿರಿ ಐಂಟ್ಸ್ (ಮಾಲೀಕರು: ರವೀಂದ್ರನಾಥ್ ರೈ, ಸಹ ಮಾಲೀಕರು: ಸಂತೋಷ್ ಶೆಟ್ಟಿ, ಬಿಪಿನ್ ರೈ), ರಾಯಲ್ ಐಂಟ್ಸ್ ಸುರತ್ಕಲ್ (ಮಾಲೀಕರು: ಕಿರಣ್ ಕುಮಾರ್ ಶೆಟ್ಟಿ) ಹಾಗೂ ಕರಾವಳಿ ಚಾಲೆಂಜರ್ಸ್ (ಮಾಲೀಕರು: ಗಿರೀಶ್ ಶೆಟ್ಟಿ ಮತ್ತು ಶ್ರೀಶಲ್ ಆಳ್ವ).
ಈ ಪಂದ್ಯಾಟಗಳು ಹಗಲು-ರಾತ್ರಿ ನಡೆಯಲಿದ್ದು ಫೆ.7ರಂದು ಶುಕ್ರವಾರ ಬೆಳಗ್ಗೆ 8:30ಕ್ಕೆ ಪ್ರಾರಂಭವಾಗಲಿವೆ. ಕ್ರೀಡಾಕೂಟದ ಔಪಚಾರಿಕ ಉದ್ಘಾಟನೆ ಸಂಜೆ 4:30ಕ್ಕೆ ನಡೆಯಲಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂಬ ಎರಡು ವಿಭಾಗಗಳಲ್ಲಿ ತಲಾ 5 ತಂಡಗಳನ್ನು ಜೋಡಿಸಲಾಗಿದ್ದು, ಕ್ರೀಡಾಕೂಟದ ವೀಕ್ಷಣೆಗೆ ಎಲ್ಲರಿಗೂ ಮುಕ್ತ ಸ್ವಾಗತವಿದೆ. ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಮಂಗಳೂರು ಮಾತ್ರವಲ್ಲ, ವಿದೇಶಗಳಿಂದಲೂ ನೂರಾರು ಮಂದಿ ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳ ಆರಂಭಕ್ಕೆ ಮುನ್ನ ತಂಡಗಳ ಮಾಲೀಕರು ಅತಿಥಿಗಳು ಹಾಗೂ ಸಂಘಟಕರ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಪ್ರೇಕ್ಷಕರಾಗಿ ಬರುವವರ ಪೈಕಿ ಮಕ್ಕಳಿಗಾಗಿ ಪ್ರತ್ಯೇಕ ಆಟದ ಮೈದಾನ ಸಜ್ಜುಗೊಳಿಸಲಾಗಿದೆ.ಇದೇ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳ ಮತ್ತು ಜಲಕ್ರೀಡಾ ಮೇಳ ಕೂಡ ನಡೆಯಲಿದೆ.
8 ಓವರ್ ನ ಮ್ಯಾಚ್ ಇದಾಗಿದ್ದು ಒಟ್ಟು 3 ಲಕ್ಷ, ಪ್ರಥಮ ಬಹುಮಾನ, ಹಾಗೂ 2 ಲಕ್ಷ ದ್ವೀತಿಯ ಬಹುಮಾನ ನಿಗದಿಪಡಿಸಲಾಗಿದೆ.ಹಾಗೂ ಇನ್ನಿತರ ಆಕರ್ಷಕ ಬಹುಮಾನ ವಿತರಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮದ್ದೂರ್ ಸಭಾ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ. ಬಂಟರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷ ರವಿರಾಜ್
ಸಂಘಟನಾ ಕಾರ್ಯದರ್ಶಿ ರಾ ಜಗೋಪಾಲ್ ರೈ ಹಾಗೂ ಬಂಟರ ಸಂಘ ಕಾವೂರು ಇದರ ಅಧ್ಯಕ್ಷರಾದ ಆನಂದ ಶೆಟ್ಟಿ ಹಾಗೂ ಇನ್ನಿತರು ಉಪಸ್ಥಿತರಿದ್ದರು..