Tuesday, February 4, 2025
Flats for sale
Homeಜಿಲ್ಲೆಮಂಗಳೂರು ; ಫೆ.18ರಿಂದ 22ರವರೆಗೆ 300 ವರ್ಷಗಳ ಇತಿಹಾಸವಿರುವ ಪೆದಮಲೆ ವಾಜಿಲ್ಲಾಯ ಧೂಮವತಿ ದೇವಸ್ಥಾನದ ಪುನರ್...

ಮಂಗಳೂರು ; ಫೆ.18ರಿಂದ 22ರವರೆಗೆ 300 ವರ್ಷಗಳ ಇತಿಹಾಸವಿರುವ ಪೆದಮಲೆ ವಾಜಿಲ್ಲಾಯ ಧೂಮವತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಉತ್ಸವ !

ಮಂಗಳೂರು ; ಕಳೆದ 2 ವರುಷಗಳಿಂದ ದೇವಾಲಯದ ಕಾಮಗಾರಿ ನಡೆಯುತ್ತಿದು ಇದೀಗ ಕೊನೆಯ ಅಂತಕ್ಕೆ ತಲುಪಿದೆ, ಫೆ.18ರಿಂದ 22ರವರೆಗೆ 300 ವರ್ಷಗಳ ಇತಿಹಾಸದ ಪೆದಮಲೆ ವಾಜಿಲ್ಲಾಯ ಧೂಮವತಿ ದೇವಸ್ಥಾನ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 300 ವರ್ಷಗಳ ಬಳಿಕ ನಡೆಯಲಿರುವ ಶ್ರೀ ಕ್ಷೇತ್ರ ಪೆದಮಲೆ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಉದ್ಘಾಟನಾ ಸಮಾರಂಭ ನೀರ್ ಮಾರ್ಗದ ಪೆದಮಲೆ ಕ್ಷೇತ್ರದಲ್ಲಿ ಆದಿತ್ಯವಾರ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ದ.ಕ ಜಿಲ್ಲೆಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಬಳಿಕ ಮಾತಾಡಿದ ಅವರು ದೈವದ ಕಾರ್ಯ ಅದು ದೈವದ ಇಚ್ಚೆ,ದೈವಗಳಿಗೆ ಮನಸ್ಸಿದ್ದರೆ ದೈವಗಳೆ ಮನೆಮನೆಗೆ ತಲುಪಿಸುತ್ತದೆ. ನಮ್ಮ ತುಳುನಾಡಿನಲ್ಲಿ ೧೪೦೦ ದೈವಗಳ ಉಲ್ಲೇಕಗಳಿದೆ ,ಆರಾಧನ ಪದ್ದತಿಯಲ್ಲಿ ವ್ಯತ್ಯಾಸಗಳಿವೆ ,ತುಳುವಾಡ ಪರಂಪರೆ ದೈವಾರಧನೆ, ಮಂತ್ರ ದೀನ ದೈವಾ ಧೂವಾವತಿ ೩೦೦ ವರ್ಷದ ಇತಿಹಾಸ ಇದೀಗ ಮತ್ತೆ ಸ್ವೀಕಾರ ಮಾಡಿದ್ದಾರೆ ಇದು ದೈವದ ಪ್ರೇರಣೆ ಎಂದು ಹೇಳಿದರು, ನೇಮವೆ ಉತ್ಸವ ನೆಮೋತ್ಸವ ಹಿರಿಯರು ನಂಬಿಕ್ಕೊಂಡು ಬಂದಂತಹ ಆರಾಧನೆ ಅದನ್ನು ಮುಂದಿನ ಪೀಳಿಗೆ ಮುಂದುವರಿಸುತ್ತಾ ಹೋಗುವುದು ಕ್ರಮ ಅದಕ್ಕೆ ದೈವವೇ ಮಾಯಾರೂಪದಲ್ಲಿ ಬಂದು ಕಾರ್ಣಿಕ ತೋರಿಸುತ್ತೆ ಎಂದರು. ಹಳತರಲ್ಲಿ ಸ್ವೀಕಾರ ಮಾಡದೆ ಎಲ್ಲಾ ಹೊಸತನವನ್ನೇ ಈ ಸುದ್ದಿ ವಾಜಿಲಾಯ ಬಯಸಿದ್ದಾರೆಂದು ಸತ್ಯ ನಾವೆಲ್ಲರೂ ಇಲ್ಲಿ ನಿಮಿತ್ತ ಮಾತ್ರ. ಗ್ರಾಮದ ದೈವ ಎದ್ದುನಿಂತಿದೆ ಎಂದರೆ ಗ್ರಾಮ ಅಭಿವೃದ್ಧಿಯನ್ನು ಹೊಂದುತ್ತದೆ. ಇಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ತುಳುನಾಡಿನ ದೈವಾರಾಧನೆಯ ಆಚಾರ ವಿಚಾರಕ್ಕೆ ಯಾವುದೇ ಭಂಗ ಬಾರದ ರೀತಿಯಲ್ಲಿ ನಡೆಯಲಿ. ತುಳುನಾಡಿನಲ್ಲಿ ದೈವಾರಾಧನೆಯೇ ಪ್ರಾಮುಖ್ಯವಾಗಿದ್ದು ಗ್ರಾಮದ ಜನರೆಲ್ಲರೂ ಇದರಲ್ಲಿ ತೊಡಗಿಕೊಳ್ಳುವಂತಾಗಲಿ“ ಎಂದರು.

ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಶೇಷಾಧರ್ ಭಟ್ ದೇವರನ್ನು ಸ್ತುತಿಸಿದರು.3೦೦ ವರ್ಷಗಳ ಹಿಂದೆ ಪಾಳುಪಿದ್ದಿದ್ದು ,ಪ್ರಶ್ನಾದ ಮೂಲಕ ದೇವಸ್ಥಾನ ದ ಶಕ್ತಿಯ ಬಗ್ಗೆ ಮಾಹಿತಿ ದೊರೆತ್ತಿದ್ದು ಇಡೀ ಗ್ರಾಮದವರಿಗೆ ಸಮಸ್ಯೆವಿದೆ ಎಂದು ಸೂಚನೆ ನೀಡಿದರು.ಆದರೆ ಊರಿನ ಸನಸ್ತ ಜನರು ಹುಡುಕಿದ್ದು ಊರಿನವರಿಗೆ ಕೊಡಿಮರದ ದಂಬೆ ಕಲ್ಲು ಸಿಕ್ಕಿದ್ದು ಇತಿಹಾಸದ ತಜ್ನಾರಲ್ಲಿ ಪರಿಶೀಲಿಸಿದಾಗ 3೦೦ ವರ್ಷದ ಇತಿಹಾಸವಿದೆ ಎಂದು ಮಾಹಿತಿ ನೀಡಿದರು.ಇದು ಗ್ರಾಮದ ದೇವಸ್ಥಾನ ಯಾವ ರೀತಿ ಇದು ಇಗಾಯಿತು ಎಂದು ಇನ್ನೂ ತಿಳಿದುಬಂದಿಲ್ಲ. ಪ್ರಶ್ನಾ ಮೂಖಾಂತರ ಸ್ಥಳದ ವಾರಿಸುದಾರರೂ ಕೂಡ ಸಿಕ್ಕಿದ್ದು ಬಳಿಕ ಸ್ಥಳವನ್ನು ದೇವಾಲಯಕ್ಕೆ ಬಿಟ್ಟುಕೊಟ್ಟರು. ಈ ದೇವಸ್ಥಾನ ಕೆಂಪು ಕಲ್ಲಿನಿಂದ ಕಪ್ಪು ಕಲ್ಲು ಕಟ್ಟಬೆಕೆಂದು ಹಲವರು ಮಾಹಿತಿ ನೀಡಿದರು ಬಳಿಕ ರೀತೆಶ್ ಎಂಬವರು ಬಂದು ದಾನ ನೀಡಿದರು,ಬಳಿಕ ಮರದ ಕೊರತೆ ಕೂಡ ಉಂಟಾಗಿ ಮತ್ತೆ ಹಿತ್ತಾಳೆಯ ಮೇಲ್ಚಾವಣಿ ಕೂಡ ನೀಡಿದರು. ಮೆನೆಜಸ್ ಎಂಬ ವ್ಯಕ್ತಿಯು ಈ ದೇವಾಲಯಕ್ಕೆ ಎಲ್ಲಾರೀತಿಯಲ್ಲಿ ಸಹಕಾರ ನೀಡಿದರು. ದೇವಾಲಯಕ್ಕೆ ಬೇಕಾದ ರಸ್ತೆಯನ್ನು ಕೂಡ ಬಿಟ್ಟುಕೊಟ್ಟರು ಇದು ಗ್ರಾಮದ ಸಂಬಂಧ ಪಟ್ಟ ದೇವಸ್ಥಾನ ವಾಗಿರುವುದರಿಂದ ಆದಷ್ಟು ಬೇಗ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಉತ್ಸವ ನಡೆಯಲಿ ಎಂದು ಮೆನೆಜಸ್ ಹೇಳಿದ್ದಾರೆಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ಬಳಿಕ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ನಾವೆಲ್ಲಾ ನಿಮಿತ್ತ ಮಾತ್ರ ,ದೈವಕ್ಕೆ ಬೇಕಾದ ಶಕ್ತಿ ಇದೆ ,ಇತಿಹಾಸ ವಿಜ್ಞಾನದ ನಂಬಿಕೆಯ ಸಮತೋಲನ ದಿಂದ ಇಲ್ಲಿ ಸಿಕ್ಕಿರುವಂತಹ ಶಿಲಾಶಾಸನದ ಮೂಲಕ ಎಲ್ಲಾ ಬೆಳಕಿಗೆ ಬಂದಿದೆ .ಇಲ್ಲಿ ಸಿಕ್ಕಿರುವ ದೈವಗಳ ಹಿಂದಿನ ಇತಿಹಾಸದ ಆಧಾರದಲ್ಲಿ ಆರಾಧನೆ ನಡೆಯಲಿ. ಇಲ್ಲಿ ಈಗಾಗಲೇ ದೈವಸ್ಥಾನದ ನಿರ್ಮಾಣ ಕಾರ್ಯಗಳು ವೇಗ ಪಡೆದುಕೊಂಡು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಡೆಯುವ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ“ ಎಂದರು.

ವೇದಿಕೆಯಲ್ಲಿ ಕಾರ್ಪೋರೇಟರ್ ಭಾಸ್ಕರ್ ಕೆ. ಮೊಯ್ಲಿ, ಹರಿಶ್ಚಂದ್ರ ಗಟ್ಟಿ, ಭಟ್ರಕೋಡಿ ವೆಂಕಟಕೃಷ್ಣ ಭಟ್, ಸೀತಾರಾಮ್ ಎ., ಆನಂದ್ ಸರಿಪಲ್ಲ ಮತ್ತಿತರರು ಉಪಸ್ಥಿತರಿದ್ದರು.

ಫೆ.18ರಿಂದ 22ರವರೆಗೆ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮದ ವಿವರ :

ಶ್ರೀ ವಾಜಿಲ್ಲಾಯ-ಮಹಿಷಂತಾಯ-ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.21ರಂದು ಬೆಳಗ್ಗೆ 8.28ಕ್ಕೆ ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ, ಮಹಿಷಂತಾಯ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಮಹಿಷಂತಾಯ ಹಾಗೂ ಶ್ರೀ ವಾಜಿಲ್ಲಾಯ ದೈವದ ನೇಮೋತ್ಸವ ನಡೆಯಲಿದೆ. ಫೆ. 22 ರಂದು ರಾತ್ರಿ 7ರಿಂದ ಧೂಮಾವತಿ ಬಂಟ ದೈವದ ನೇಮೋತ್ಸವ ಜರುಗಲಿದೆ.

ಫೆ.16ರಂದು ಬೆಳಗ್ಗೆ 10ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಕುಡುಪು ಶ್ರೀ ಆನಂತ ಪದ್ಮನಾಭ ದೇವಸ್ಥಾನದಿಂದ ಹೊರೆಕಾಣಿಕೆ ಹೊರಡಲಿದೆ. ಫೆ.18 ಮಧ್ಯಾಹ್ನ 3 ಗಂಟೆಯಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಪೆದಮಲೆ ಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿ ಸನ್ಮಾನ, ಆಲಯ ಪ್ರತಿಗ್ರಹ, ರಾಕ್ಷೋ ಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮತ್ತು ನೂತನ ಮೂಗಮೂರ್ತಿ, ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಜರುಗಲಿದೆ.

ಸಂಜೆ 5:30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಫೆ.19ರಂದು ಬೆಳಗ್ಗೆ 7 ಗಂಟೆಯಿಂದ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ, ತುಳಸಿ ಪ್ರತಿಷ್ಠೆ ಮತ್ತು ದ್ವಾರಪೂಜೆ ಜರುಗಲಿದೆ.

ಬೆಳಗ್ಗೆ 8.30ಕ್ಕೆ ಶ್ರೀ ದೈವಗಳ ಚಾವಡಿಯ ಪ್ರವೇಶ ಪ್ರತಿಷ್ಠೆ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ ಜರುಗಲಿದೆ. ಸಂಜೆ 4 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಾಕ್ಷೋ ಘ್ನ ಹೋಮ, ವಾಸ್ತು ಹೋಮ ಮತ್ತು ವಾಸ್ತು ಬಲಿ ಜರುಗಲಿದೆ.

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆರ್ಚಕ ಅನಂತ ಪದ್ಮನಾಭ ಅಸ್ರಣ್ಣ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶ್ರೀ ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲಿಸಲಿದ್ದಾರೆ. ಸಂಸದ ಬೃಜೇಶ್ ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹಾಗೂ ಮತ್ತಿತರ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 7:30ಕ್ಕೆ ಪ್ರೊ. ಅಮೃತ ಸೋಮೇಶ್ವರ ವಿರಚಿತ, ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ನಿರ್ದೇಶನದ, ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಅರ್ಪಿಸುವ ಎಳುವೆರ್ ದೈಯರ್ ಕಾರ್ಯಕ್ರಮ ನಡೆಯಲಿದೆ.

ಫೆ.20ರಂದು ಬೆಳಗ್ಗೆ 8 ಗಂಟೆಯಿಂದ ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮಗಳು ಮತ್ತು ನವಗ್ರಹ ಶಾಂತಿ ಹೋಮ ಜರುಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular