Friday, March 13, 2026
Flats for sale
Homeಜಿಲ್ಲೆಮಂಗಳೂರು : ಫೆ.18 ರಂದು ಮಂಗಳೂರಿನ ಮಾತಾ ಅಮೃತನಂದಮಯಿ ಮಠದಲ್ಲಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ 18...

ಮಂಗಳೂರು : ಫೆ.18 ರಂದು ಮಂಗಳೂರಿನ ಮಾತಾ ಅಮೃತನಂದಮಯಿ ಮಠದಲ್ಲಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ 18 ನೇ ಪ್ರತಿಷ್ಠಾ ವರ್ಧಂತಿ ಉತ್ಸವ…!

ಮಂಗಳೂರು ; ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ 18 ನೆಯ ಪ್ರತಿಷ್ಠಾ ವರ್ಧಂತಿ ಉತ್ಸವ ಫೆ.18 ರಂದು ಮಂಗಳವಾರ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟ ಒಂದೇ ಶಿಲೆಯಲ್ಲಿ ರೂಪುಗೊಂಡ, ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ನಾಲ್ಕು ದ್ವಾರಗಳ ಮೂಲಕ ದರ್ಶನ ಮಾಡಬಹುದಾದ ಶಿವ, ಪಾರ್ವತೀ ದೇವಿ, ಗಣಪತಿ ಮತ್ತು ಸುಬ್ರಹ್ಮಣ್ಯ ವಿಗ್ರಹವುಳ್ಳ ವಿಶಿಷ್ಟ ಕ್ಷೇತ್ರ ಇದಾಗಿದ್ದು, ದೋಷನಿವಾರಣಾ ಕ್ಷೇತ್ರವಾಗಿ ಜನಜನಿತವಾಗಿದೆ ಎಂದು ತಿಳಿಸಿದರು.

ಕರಾವಳಿ ಕರ್ನಾಟಕ ಹಾಗೂ ನೆರೆಯ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲಿರುವ ಈ ಕಾರ್ಯಕ್ರಮವನ್ನು ಬ್ರಾಹ್ಮ ಮುಹೂರ್ತದಲ್ಲಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಲಲಿತಾ ಅಷ್ಟೋತ್ತರ ಪಠಣದೊಂದಿಗೆ ಆರಂಭಿಸಲಿರುವರು ಎಂದು ಹೇಳಿದ್ದಾರೆ.

ಮುಂಜಾನೆ 5.30 ರಿಂದ ಮಂಗಳೂರಿನ ರುದ್ರಾಧ್ಯಾಯಿ ತಂಡದವರಿಂದ ರುದ್ರಪಠಣ ಮತ್ತು ವೇದಮಂತ್ರ ಪಠಣ. ರುದ್ರಪೂಜೆ ಜರುಗಲಿರುವುದು. ಅನಂತರ ಕವಿ ಡಾ. ವಸಂತಕುಮಾರ ಪೆರ್ಲ ಅವರು ಬ್ರಹ್ಮಸ್ಥಾನದ ಬಗ್ಗೆ ರಚಿಸಿರುವ ಗೀತೆ ಬಿಡುಗಡೆಯಾಗುವುದು.

ಬೆಳಗೆ, 9.00 ರಿಂದ ಸಾರ್ವಜನಿಕ ಮಹಾಧನ್ವಂತರಿ ಹೋಮ ಮತ್ತು ಭಕ್ತರು ಸ್ವತಃ ತಮ್ಮ ಶ್ರೇಯೋಭಿವೃದ್ಧಿಗಾಗಿ ತಾವೇ ಪೂಜೆಗೈದು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ವಿಶೇಷ “ಸರ್ವೈಶ್ವರ್ಯ ಪೂಜೆ ” ಹಮ್ಮಿಕೊಳ್ಳಲಾಗಿದೆ.

ವಿಶೇಷ ಲೇಖನ ಯಜ್ಞ

18 ನೆಯ ಪ್ರತಿಷ್ಠಾ ದಿನದ ಅಂಗವಾಗಿ ಅಮ್ಮನವರ ಭಕ್ತರಿಂದ ವಿಶೇಷ ಲೇಖನಯಜ್ಞ ಹಮ್ಮಿಕೊಳ್ಳಲಾಗಿದೆ. ಅಮ್ಮನ ಭಕ್ತರು ಅನುಗ್ರಹ ಪ್ರಾಪ್ತಿಗಾಗಿ ಮತ್ತು ಅಮ್ಮನವರು ಲೋಕಾರ್ಪಣೆ ಗೊಳಿಸಿದ ಕ್ಷೇತ್ರದ ಜೊತೆಗೆ ಬಾಂದವ್ಯ. ಬೆಳೆಸುವ

ಉದ್ದೇಶದಿಂದ ಈ ಸೇವೆ ನಡೆಯಲಿದೆ. ಲೇಖನಯಜ್ಞದಲ್ಲಿ ಭಾಗವಹಿಸುವ ಭಕ್ತರು ಅಂದು ಸರ್ವೈಶ್ವರ್ಯ ಪೂಜೆಯಲ್ಲಿ ಭಾಗವಹಿಸಿ ಸದ್ಗುರುಗಳ ಸಾನ್ನಿಧ್ಯದಲ್ಲಿ ಭಕ್ತಿ ಭಾವದಿಂದ ಸಮರ್ಪಣೆ ಮಾಡಲಿರುವರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.

ಮಧ್ಯಾಹ್ನ 2 ರಿಂದ 3.30 ರ ತನಕ ಭಜನೆ ಹಾಗೂ ಸಂಜೆ 4.00 ರಿಂದ 5.30 ರ ತನಕ ಹರಿಕಥೆ ಕಥಾಪುವಚನ ಶಿವಪಾರ್ವತಿ ಕಲ್ಯಾಣ ಏರ್ಪಾಡಾಗಿದೆ. ಬಳಿಕ ಕಾಸರಗೋಡು, ದ.ಕ. ಮತ್ತು ಉಡುಪಿ ಜಿಲ್ಲೆಯ ಆಯ್ದ ಹಿರಿಯ ಆರು ಮಂದಿ ಜೋತಿಷಿಗಳನ್ನು ಗೌರವಿಸುವ ಕಾರ್ಯಕ್ರಮವಿದೆ ಎಂದು ತಿಳಿಸಿದ್ದಾರೆ.

ಸಂಜೆ 5.30 ಕ್ಕೆ ಕಲಶಪೂಜೆ, ಮಹಾ ಅಭಿಷೇಕ, ಅಲಂಕಾರ ಪೂಜೆ ಮತ್ತು ದೀಪಾರಾಧನೆ ಇರುತ್ತದೆ. ಸಂಜೆ 7.00ರಿಂದ ಜಿಲ್ಲೆಯ ವಿವಿಧ ಭಜನಾ ತಂಡದವರಿಂದ ಕುಣಿತ ಭಜನೆ ಜರುಗಲಿರುವುದು. ರಾತ್ರಿ 8.30 ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ.

18 ನೆಯ ಪ್ರತಿಷ್ಠಾ ದಿನದ ವಿಶೇಷ ಸೇವೆಗಳು ಈ ರೀತಿ ಇವೆ.

ಕಲಶಪೂಜೆ,ಉದಯಾಸ್ತಮಾನ ಪೂಜೆ, ಅಲಂಕಾರ ಪೂಜೆ,ಮಹಾಧನ್ವಂತರಿ ಹೋಮ, ಮತ್ತು ಸರ್ವಸೇವೆ, ಸರ್ವೈಶ್ವರ್ಯ ಪೂಜೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅದ್ಯಕ್ಷರು ಸುರೇಶ್ ಅಮೀನ್,ಡಾ.ವಸಂತ್ ಪೆರ್ಲಾ,ಯೋಗಿಶ್ ಎಸ್.ಡಾ.ದೇವದಾಸ್ ಪುತ್ರನ್,ಹಾಗೂ ಯೋಗಿಶ್ ಸಾಲಿಯನ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular