ಮಂಗಳೂರು ; ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಯಾಗಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಟೀಕೇಟ್ ನೀಡಿದೆ.
ಟಿಕೇಟ್ ನೀಡಿದ ವಿಚಾರವನ್ನು ಸಮರ್ಥಿಸಿದ ಎಸ್ ಡಿಪಿಐ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ
ನಮ್ಮದು ಸಂವಿದಾನವನ್ನು ಒಪ್ಪಿಕೊಂಡ ಪಕ್ಷ ಎಂದು ಸಮರ್ಥಿಸಿದ್ದಾರೆ.
ಚುನಾವಣಾ ಆಯೋಗದ ಅಧಿನಿಯಮದಂತೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.ಆರೋಪಿತ ವ್ಯಕ್ತಿ ಚುನಾವಣೆಗೆ ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ,ಈಗಾಗಲೇ ಹಲವಾರು ಜನ ಜೈಲಿನಲ್ಲಿ ಇದ್ದೇ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದಿದ್ದಾರೆ.
ಶಾಫಿ ಬೆಳ್ಳಾರೆಯನ್ನು ಕಾರ್ಯಕರ್ತರು ಮಾಡಿದ ಆಯ್ಕೆದ್ದಾರೆ,ಅದನ್ನು ರಾಜ್ಯದ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ
ಶಾಫಿ ಬೆಳ್ಳಾರೆಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ಕೆಲಸ ಮಾಡ್ತಾರೆಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಎಲ್ಲೂ ಗೊಂದಲ ಸೃಷ್ಟಿಯಾಗಿಲ್ಲ,ಕಾನೂನು ನೀಡಿರುವ ಅವಕಾಶವನ್ನು ಬಳಸಿ ಸ್ಪರ್ಧೆ ಮಾಡುತ್ತಾರೆ,ಚುನಾವಣೆಯ ವೇಳೆ ಅವರ ಜಾಮೀನಿಗೆ ಪ್ರಯತ್ನಿಸುತ್ತೇವೆ,ಜಾಮೀನು ಸಿಗದಿದ್ದರೆ ಪ್ರತಿಯೊಬ್ಬ ಕಾರ್ಯಕರ್ತ ಶಾಫಿ ಬೆಳ್ಳಾರೆಯಾಗಿ ಕೆಲಸ ಮಾಡ್ತೆವೆಂದು ಹೇಳಿದ್ದಾರೆ.