Thursday, March 12, 2026
Flats for sale
Homeಜಿಲ್ಲೆಮಂಗಳೂರು : ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಮಂಗಳೂರು- ಮೈಸೂರು ರಸ್ತೆಗಳು ಇಂದು ರಾತ್ರಿಯಿಂದಲೇ ಬಂದ್.

ಮಂಗಳೂರು : ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಮಂಗಳೂರು- ಮೈಸೂರು ರಸ್ತೆಗಳು ಇಂದು ರಾತ್ರಿಯಿಂದಲೇ ಬಂದ್.

ಮಂಗಳೂರು : ಕಳೆದ ಹಲವು ದಿನಗಳಿಂದ ಮುಂಗಾರು ಮಳೆ ಧಾರಾಕಾರ ಸುರಿಯುತ್ತಿದ್ದು ಇದರಿಂದ ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿವೆ ಮಡಿಕೇರಿ ಮೈಸೂರು ರಸ್ತೆಗಳು ಇಂದು ರಾತ್ರಿಯಿಂದಲೇ ಸಂಚಾರ ಬಂದ್ ಆಗಿದೆ.

ಕರ್ತೋಜಿ ಗ್ರಾಮ ಬಳಿ ಹೆದ್ದಾರಿ ದುರಸ್ತಿ ಕಾರ್ಯ ಹಿನ್ನಲೆ ಇಂದು ರಾತ್ರಿ 8 ಗಂಟೆಯಿಂದ 22 ರ ಬೆಳಗ್ಗೆ 6 ಗಂಟೆವರೆಗೆ ಮಡಿಕೇರಿಯಿಂದ ಸಂಪಾಜೆ ವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ ಹೊರಡಿಸಿದ್ದಾರೆ.

ಭೂ ಕುಸಿತದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್​​ನಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಟು ಮಂಗಳೂರಿಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಮೂರು ಮಾರ್ಗಗಳಿವೆ. ಒಂದು ಚಾರ್ಮಾಡಿ ಘಾಟ್ ಮೂಲಕ, ಇನ್ನೊಂದು ಶಿರಾಡಿಘಾಟ್​, ಮತ್ತೊಂದು ಮಡಿಕೇರಿ- ಸಂಪಾಜೆ ಘಾಟ್​​ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದು. ಆದ್ರೆ, ಇದೀಗ ಈ ಎಲ್ಲಾ ರಸ್ತೆ ಮಾರ್ಗಗಳು ಬಂದ್ ಆಗಿವೆ. ಅಲ್ಲಲ್ಲಿ ರಸ್ತೆ ಕುಸಿಯುವ ಭೀತಿ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಎಲ್ಲಾ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಕೊಡಗಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲೇ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಹಾಗಾಗಿ ಮಡಿಕೇರಿಯಿಂದ‌ ಮಂಗಳೂರಿಗೆ ತೆರಳುವವರು ತೀವ್ರ ಪರದಾಡುವಂತಾಗಿದೆ. ಕೇವಲ‌ ಎರಡು ಗಂಟೆ ಮೊದಲು ಹೆದ್ದಾರಿ ಬಂದ್​ಗೆ ಆದೇಶ ನೀಡಲಾಗಿದ್ದು, ಆದೇಶದ ಬಗ್ಗೆ ಗೊತ್ತಿಲ್ಲದೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ.ರಾಷ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವೆ ತೀವ್ರ ಮಳೆಯಿಂದಾಗಿ ರಸ್ತೆ ಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತಾಸಕ್ತಿಯಿಂದ ಈ ಭಾಗದಲ್ಲಿ ಜುಲೈ 18ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ರಿಂದ ಮರದಿನ ಬೆಳಿಗ್ಗೆ 6 ಗಂಟೆ ವರೆಗೆ ಎಲ್ಲಾ ವಾಹನಗ ಸಂಚಾರ ನಿರ್ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular