Sunday, February 23, 2025
Flats for sale
Homeಜಿಲ್ಲೆಮಂಗಳೂರು : ಪ್ರತಿ ಜಿಲ್ಲೆಯಲ್ಲಿ "ಕ್ಷಾತ್ರ ಸಂಗಮ" ನಡೆಸಿ ಕ್ಷತ್ರಿಯ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆಯಬೇಕು...

ಮಂಗಳೂರು : ಪ್ರತಿ ಜಿಲ್ಲೆಯಲ್ಲಿ “ಕ್ಷಾತ್ರ ಸಂಗಮ” ನಡೆಸಿ ಕ್ಷತ್ರಿಯ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆಯಬೇಕು ; ಮಾಜಿ ಸಚಿವ ಕೃಷ್ಣ.ಜೆ. ಪಾಲೇಮಾರ್…!

ಮಂಗಳೂರು : ರಾಮಕ್ಷತ್ರಿಯ ಸೇವಾ ಸಂಘ(ರಿ) ಮಂಗಳೂರು ಇದರ ನೇತೃತ್ವದಲ್ಲಿ ಮೋರ್ಗನ್ಸ್‌ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್ ನಲ್ಲಿ “ಕ್ಷಾತ್ರ ಸಂಗಮ-3” ರಾಮಕ್ಷತ್ರಿಯರ ಸಮಾವೇಶದ ಉದ್ಘಾಟನೆ ಇಂದು ನಡೆಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ನೇರೆದಿರುವ ಗಣ್ಯರ ನ್ನು ಜೆ.ಕೆ ರಾವ್ ರವರು ಸ್ವಾಗತಿಸಿದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾರಂಭವನ್ನು ದೀಪಬೆಳಗಿಸುವುದರ ಮೂಲಕ ಶ್ರೀ ಜೆ ಕೃಷ್ಣ ಪಾಲೆಮಾರ್ ನೆರವೇರಿಸಿದರು. ಯೋಗೀಶ್ ಕುಮಾರ್ ಜೆಪ್ಪುರವರು ಪ್ರಸ್ತಾವಿಕ ಭಾಷಣ ಮಾಡಿದರು.

ಉಧ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಈ ಕಾರ್ಯ ಕ್ರಮ ಕ್ಷತ್ರಿಯ ಸಂಗಮದ ಹೆಗ್ಗುರುತು ಹಿಂದಿನ ಕಾಲದಲ್ಲಿ ನಾಲ್ಕು ಪಂಡಗಳಿದ್ದೂ ಇವತ್ತೂ ನೂರಾರು ಪಂಗಡಗಳಾಗಿವೆ.ರಾಜ್ಯದಲ್ಲಿ 39 ಪಂಗಡ ಗಳಿವೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಒಗ್ಗೂಡಬೇಕು,ಇದು ಇಲ್ಲಿಗೆ ಮಾತ್ರ ನಿಲ್ಲದೆ ಪ್ರತಿ ಜಿಲ್ಲೆಯಲ್ಲಿ ಕ್ಷಾತ್ರ ಸಂಗಮ ನಡೆಸಿ ಒಗ್ಗೂಡಿಸಬೇಕು. ನಮ್ಮ ನಿಷ್ಠಾವಂತ ಸಮಾಜದಲ್ಲಿ ಪೋಲಿಸ್ ಇಲಾಖೆಯ ಇದ್ದು ಎಲ್ಲಾ ನಾಯಕರು ಮುಂದೆಬರಬೇಕು, ಹುಟ್ಟಿದ ಮೇಲೆ ಸಮಾಜಕ್ಕೆ ಕೊಡುಗೆ ಕೊಡಬೇಕು, ದೇಶಭಕ್ತಿ,ದೈವ ಭಕ್ತಿಯನ್ನು ನೀಡಬೇಕು,ಮುಂದಿನ ದಿನಕ್ಕೆ ಒಗ್ಗಟ್ಟಿನ ಮಂತ್ರದೊಂದಿಗೆ ಈ ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಬಳಿಕ ಮಾತನಾಡಿದ ವಾಗ್ಮಿ ಶ್ರೀಕಾಂತ್ ಶೆಟ್ಟಿಯವರು ಕ್ಷಾತ್ರ ಸಂಗಮದ ಹೆಸರು ಕಂಡು ರೋಮಾಂಚನಗೊಂಡು ಈ ಕಾರ್ಯಕ್ರಮಕ್ಕೆ ಬಂದೆ ಎಂದು ತಿಳಿಸಿದರು, ಸಮಾಜದ ರಕ್ಷಣೆಗೆ ನಿಲ್ಲತ್ತಾನೋ ಅವನು ಕ್ಷತ್ರಿಯ…ಎಲ್ಲಾ ಕಡೆ ಅಕ್ರಮಣಮಾಡಿ ಕೊನೆಗೆ ಕರಾವಳಿ ಭಾಗಕ್ಕೆ ಬಂದರು, ಇತಿಹಾಸದ ಪ್ರಕಾರ ಉಳ್ಳಾಲದ ರಾಣಿ ಅಬ್ಬಕ್ಕ ರಾಣಿಯ ಪರಾಕ್ರಮದಿಂದ ಪೊರ್ಚುಗೀಸರನ್ನು ಒದ್ದು ಓಡಿಸಿದ್ದಾರೆ.ಅಂತೇಯೆ ಬೇಕಲ್ ಕೊಟೆಯ ತಿಮ್ಮ ನಾಯಕನ ಕಥೆಯ ಬಗ್ಗೆ ವಿವರಿಸಿದರು,ಬ್ರಿಟಿಷರು ರಾಮಕ್ಷತ್ರಿಯನ್ನು ಹಂಗಿಸಿದ್ದರು ಯುದ್ದದಲ್ಲಿ ಬ್ರಿಟಿಷರು ಗೆದ್ದರು ಬೇಕಲ ತಿಮ್ಮ ನಾಯಕನನ್ನು ಫಿರಂಗಿ ಬಾಯಿಗೆ ಕಟ್ಟಿದ್ದು ಈ ಬ್ರಿಟಿಷರು ತಿಮ್ಮ ನಾಯಕನ್ನು ಉಡಾಯಿಸಿ ದೇಹವನ್ನು ಚಿದ್ರ ಚಿದ್ರ ಮಾಡಿ ಕೊಂದುಹಾಕಿದರು ದೇಶಕ್ಕಾಗಿ ಪ್ರಾಣತ್ಯಾಗಮಾಡಿದ ತಿಮ್ಮ ನಾಯಕನ್ನು ಈ ಕ್ಷತ್ರಿಯ ಸಮಾಜ ಸ್ಮರಿಸಬೇಕು ಎಂದರು.ರಾಮ – ಕ್ಷತ್ರಿಯ ಪರಾಕ್ರಮದ ಸಂಗಮ ಎಂದು ಹೇಳಿದರು ಅಲ್ಲಲ್ಲಿ ಕೋಟೆಯನ್ನು ಕಟ್ಟಿದ ನಂಬಿಕಸ್ತ ಸಮಾಜದ ಇತಿಹಾಸದ ಬಗ್ಗೆ ತಿಳಿಸಿದರು. ಬಿಕ್ಷು ಲಕ್ಷಣಾನಂದ ಸ್ವಾಮೀಜಿಯನ್ನು ಸ್ಮರಿಸಿದರು ಅಂದು ಮಣ್ಣಿನಲ್ಲಿ ನಡೆದ ಸಸಿ ಇಂದು ಮರವಾಗಿ ಬೆಳೆದಿದೆ ,ಕ್ಷತ್ರಿಯ ತ್ವ ಅಂದರೆ ಜಾತಿ ಅಲ್ಲ ಅದಿ ಮನೋಸ್ಥಿತಿ ಎಂದರು,ಔರಂಗಜೇಬನ ಧಾಳಿಯ ಸಂದರ್ಭದಲ್ಲಿ ಗಾಟಿಯಲ್ಲೆ ತಡೆಯುವಂತಹ ಕೆಲಸ ಮಾಡಿದ್ದು ಈ ಕ್ಷತ್ರಿಯ ಸಮಾಜ,ಚಿತ್ತಾರ ಗಡ ಮೇವಾಡದ ಹೋರಾಟದ ಬಗ್ಗೆ ಹೇಳಿದ ಅವರು ಸಮಾಜವನ್ನು ಉಳಿಸುವ ನಿಟ್ಟಿನಲ್ಲಿ ಹೆಂಡತಿ ತನ್ನ ಕತ್ತನ್ನು ಕತ್ತರಿಸಿಕೊಟ್ಟ ಘಟನೆ ಕ್ಷತ್ರಿಯ ಸಮಾಜದ ಮಹಿಳೆಯಿಂದ ನಡೆದದು ಇತಿಹಾಸ,ಆದರಿಂದ ಕ್ಷತ್ರಿಯ ಸಮಾಜ ಮುಂಚೂಣಿಯಲ್ಲಿ ನಿಂತು ಸವಿಂಧಾನ ಉಳಿವಿಗಾಗಿ ಸಮಾಜ ಹೋರಾಟ ಮಾಡೋಣ ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾದ ಸಿ.ಚ್ ಮುರಳಿಧರ್,ಯೋಗಿಶ್ ಜೆಪ್ಪು,ವಿನೋದ್ ಕುಮಾರ್,ಅನಂತ ಪದ್ಮನಾಭ, ಸಂದೀಪ್ ಜೆ,ರಾಘವೇಂದ್ರ ರಾವ್,ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಸುರೇಶ್ ರಾವ್,ದಿನೇಶ್,ಸಂಘದ ಅಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular