ಮಂಗಳೂರು : ಯೂರೋಕಿಡ್ಸ್ ಪ್ರಿ-ಸ್ಕೂಲ್‌ನ ಮಕ್ಕಳು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಕಚೇರಿಗೆ ಭೇಟಿ ನೀಡಿ, ಗುರುವಾರ ಅವರ ಕಚೇರಿಯಲ್ಲಿ ಅವರೊಂದಿಗೆ ಮುಗ್ದ ಮನಸಿನ ಪುಟಾಣಿ ಮಕ್ಕಳೊಂದಿಗೆ ತಮ್ಮ ಅಮೂಲ್ಯ ಕ್ಷಣವನ್ನು ಕಳೆದರು. ಕಮಿಷನರ್ ಕೂಡ ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಸಂವಾದ ನಡೆಸಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಉತ್ತಮ ಸಮಯವನ್ನುಮುಗ್ದ ಮನಸ್ಸಿನೊಂದಿಗೆ ಕಳೆದರು. ಮಕ್ಕಳು ಪೊಲೀಸ್ ಅಧಿಕಾರಿ ಮತ್ತು ಶಿಕ್ಷಕರಾಗಲು ಬಯಸುತ್ತಾರೆ ಎಂಬ ಮಾತುಗಳು ಕೇಳಿಬಂದವು. ಕಮಿಷನರ್ ಮಕ್ಕಳಿಗೆ ಚಾಕಲೇಟ್, ಜ್ಯೂಸ್ ಮತ್ತು ಪೆನ್ಸಿಲ್ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದರು.


