ಮಂಗಳೂರು : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ,ಇನ್ಸ್ಪೆಕ್ಟರ್ ಪರ ದೂರುದಾರರಾದ ಸುಮತಿ ನಾಯ್ಕ್ ಅಕ್ಕ ಪ್ರಪುಲ್ಲ ನಾಯ್ಕ್ ಪತ್ರಿಕಾಗೋಷ್ಠಿ ಕರೆದಿದ್ದು ಕೌಟುಂಬಿಕ ಕಲಹದ ಪ್ರಕರಣಕ್ಕೆ ಇತ್ಯರ್ಥಗೊಳಿಸಲು ಇನ್ಸ್ಪೆಕ್ಟರ್ ಸಂದೇಶ್ ಸೂಚಿಸಿದ್ದರು ,ಆದರೆ ನನ್ನ ತಂಗಿ ಇನ್ಸ್ಪೆಕ್ಟರ್ ಸಂದೇಶ್ ಟಾರ್ಗೆಟ್ ಮಾಡ್ತಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಈ ಅವಳು ತನ್ನ ಗಂಡ ಹಾಗೂ ಮಗನನ್ನು ಜೊತೆಯಲ್ಲಿಸಿದಕ್ಕೆ ದೂರು ನೀಡಿದ್ದೆ.ಅಲ್ಲಿ ಇನ್ಸ್ಪೆಕ್ಟರ್ ನಮ್ಮ ಪರವಹಿಸಿದ್ದರು. ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಒಳ್ಳೆಯ ವ್ಯಕ್ತಿ ,ದುರುದ್ವೇಷದಿಂದ ನನ್ನ ತಂಗಿ ಈ ದೂರು ದಾಖಲಿಸಿದ್ದಾಳೆ.ಈ ಹಿಂದೆ ಕೂಡ ಹಲವು ಕೇಸು ದಾಖಲಿಸಿದ್ದಳು. ಇವಳಿಗೆ ಉದ್ಯೋಗ ವಿಲ್ಲ, ಐಷರಾಮಿ ಜೀವನ ನಡೆಸುತ್ತಿದ್ದಾಳೆ ,ಇವಳಿಗೆ ಹಣ ಎಲ್ಲಿಂದ ಬಂತು ಈ ಬಗ್ಗೆ ತನಿಖೆ ಸತ್ಯ ಹೊರಬರುತ್ತೆ ಎಂದು ಸುಮತಿ ನಾಯ್ಕ್ ಅಸಲಿಯತ್ತು ಅಕ್ಕ ಪ್ರಪುಲ್ಲ ನಾಯ್ಕ್ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸುಮತಿ ನಾಯಕ್ ವಿರುದ್ಧ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಟಿಎಂ ಲೇಔಟ್‌ನ ಕೆಎಎಸ್ ಕಾಲೋನಿಯಲ್ಲಿರುವ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ಗ್ರಾಹಕರನ್ನು ಆಕರ್ಷಿಸಿದ ಆರೋಪದ ಮೇಲೆ ಸುಮತಿ ಮತ್ತು ಕಾರ್ತಿಕೇಯನ್ ಎಂಬ ಸಹಚರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ಸ್‌ಪೆಕ್ಟರ್ ಸಂದೇಶ್ ಪಿ ಜಿ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿ ಮಾತನಾಡಿದ ಪ್ರಫುಲ್ಲಾ, ತಮ್ಮ ಕುಟುಂಬ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಅಧಿಕಾರಿ ಮಾಡಿದ ಪ್ರಯತ್ನವು ಅವರ ಮೇಲೆ ಅಪಪ್ರಚಾರ ಮಾಡುವ ಪಿತೂರಿಯನ್ನು ಪ್ರಚೋದಿಸಿದೆ ಎಂದು ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ರಾಜ್ಯ ಸಮಿತಿಯ ರಾಜ್ಯ ಅಧ್ಯಕ್ಷ ವರ್ತೂರ್ ಮಂಜುನಾಥ್ ಮತ್ತು ಸದಸ್ಯ ಹರೀಶ್ ಕೂಡ ಉಪಸ್ಥಿತರಿದ್ದರು.


