Friday, March 13, 2026
Flats for sale
Homeಜಿಲ್ಲೆಮಂಗಳೂರು : ಪಣಂಬೂರ್ ಬೀಚ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ,ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ,...

ಮಂಗಳೂರು : ಪಣಂಬೂರ್ ಬೀಚ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ,ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ, ಮೂವರು ರಾಮ್ ಸೇನೆ ಕಾರ್ಯಕರ್ತರ ಬಂಧನ.

ಮಂಗಳೂರು : ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಅನ್ಯಕೋಮಿನ ಜೋಡಿ ಸರಸವಾಡುತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು ಯುವಕ ಯುವತಿಯನ್ನ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರು ಕಿರಿಕ್ ಮಾಡಿದ್ದಾರೆ.

ಯುವಕನನ್ನು ಬಂಟ್ವಾಳದ ಪಾಣೆಮಂಗಳೂರಿನ ಗೋಲಿಪಡ್ಡುವಿನ ನಿಜಾಮುದ್ದೀನ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಯುವತಿ ಎಂದು ತಿಳಿದುಬಂದಿದೆ . ಫೇಸ್ ಬುಕ್ ಮೂಲಕ ಯುವತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡು ಬೀಚ್ ಗೆ ಕರೆದು ಸುತ್ತಾಡುತ್ತಿದ್ದರು ಎಂದು ಹಿಂಧೂ ಸಂಘಟನೆಯ ಕಾರ್ಯಕರ್ತರ ಆರೋಪ.

ಸದ್ಯ ಪಣಂಬೂರು ಪೊಲೀಸರು ಮೂರು ಮಂದಿ ರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular