Wednesday, March 4, 2026
Flats for sale
Homeಜಿಲ್ಲೆಮಂಗಳೂರು : ಪಡೀಲ್ ಅಂಡರ್ ಪಾಸ್ ನಲ್ಲಿ ನಡೆದ ಭೀಕರ ಅಫಘಾತ ಯುವಕ ಸಾವು,ಇನ್ನಿಬ್ಬರು ಗಂಭೀರ.

ಮಂಗಳೂರು : ಪಡೀಲ್ ಅಂಡರ್ ಪಾಸ್ ನಲ್ಲಿ ನಡೆದ ಭೀಕರ ಅಫಘಾತ ಯುವಕ ಸಾವು,ಇನ್ನಿಬ್ಬರು ಗಂಭೀರ.

ಮಂಗಳೂರು : ಅತಿವೇಗ ಹಾಗೂ ನಶೆಯ ಅಮಲು ಎಂಬುದು ಗೊತ್ತಿಲ್ಲ ,ಈ ಅಪಘಾತ ಆಗುವ ಮೊದಲು ಮುಂದೆ ಬರುವ ಬಸ್ಸಿಗೆ ಡಿಕ್ಕಿ ಹೊಡೆಯುವ ಸಂಭವ ಇದ್ದು ಸ್ಥಳೀಯರು ಸವಾರರ ವರ್ತನೆ ನೋಡಿ ದಂಗಾಗಿದ್ದ ಘಟನೆ ಇಂದು ನಗರದ ಪಡೀಲ್ ಅಂಡರ್ ಪಾಸ್ ನಲ್ಲಿ ನಡೆದಿದೆ , ಸಾವನ್ನಪ್ಪಿದ ಯುವಕನನ್ನು ಬಜಾಲ್ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ತಿಳಿಯಲಾಗಿದೆ.

3 ದಿನದ ಮೊದಲು ಬೈಕ್ ಅನ್ನು ಖರೀದಿ ಮಾಡಿದ್ದು ಎಂಬುದು ಸುದ್ದಿ , ಬೈಕ್ ನಲ್ಲಿ ಮೂವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ಹಿನ್ನೆಲೆಯಲ್ಲಿ ಫುಟ್ ಪಾತ್ ನ ಗೋಡೆಯ ಡಿಕ್ಕಿ ಹೊಡೆದು ಬೈಕ್ ಫುಟ್ ಪಾತ್ ಒಳಗಡೆ ಎಸೆಯಲ್ಪಟ್ಟಿದೆ. ಗಾಡ್ವಿನ್(19) ಹಾಗೂ ಆಷಿತ್(17) ಎಂಬವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಕನಾಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತನಿಖೆ ನಡೆಯುತ್ತಿದೆ .

RELATED ARTICLES

LEAVE A REPLY

Please enter your comment!
Please enter your name here

Most Popular