Saturday, July 25, 2026
Homeಜಿಲ್ಲೆಮಂಗಳೂರು : ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆದು ಹಾಕಿ: ಸಾರ್ವಜನಿಕರಿಗೆ ಡಿಸಿ ಸೂಚನೆ.

ಮಂಗಳೂರು : ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆದು ಹಾಕಿ: ಸಾರ್ವಜನಿಕರಿಗೆ ಡಿಸಿ ಸೂಚನೆ.

ಮಂಗಳೂರು : ಪಡಿತರ ಚೀಟಿಯಿಂದ ಮೃತ ಕುಟುಂಬದ ಸದಸ್ಯರ ಹೆಸರನ್ನು ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಪಡಿತರ ಚೀಟಿಯಲ್ಲಿ ಇನ್ನೂ 13,133 ಮಂದಿ ಮೃತರ ಹೆಸರು ಉಳಿದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ಮೃತರ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಮೂಲಕ ತಕ್ಷಣ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಡಿಸಿ ಸೂಚಿಸಿದ್ದಾರೆ.

ಪಡಿತರ ಚೀಟಿಯಲ್ಲಿ ಮೃತರ ಹೆಸರನ್ನು ಮುಂದುವರಿಸುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ ಫಲಾನುಭವಿಗಳು ಅನರ್ಹರಾಗುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular