Saturday, March 14, 2026
Flats for sale
Homeಜಿಲ್ಲೆಮಂಗಳೂರು : ನೇತ್ರಾವತಿ ಸೇತುವೆಯಲ್ಲಿ ಮೀನಿನ ಲಾರಿಯ ಎಡವಟ್ಟಿಗೆ ಬೈಕ್ ಸವಾರ ಬಲಿ .

ಮಂಗಳೂರು : ನೇತ್ರಾವತಿ ಸೇತುವೆಯಲ್ಲಿ ಮೀನಿನ ಲಾರಿಯ ಎಡವಟ್ಟಿಗೆ ಬೈಕ್ ಸವಾರ ಬಲಿ .

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 21 ವರ್ಷದ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಕೋಟೆಕಾರ್‌ನ ಹನೀಫ್‌ ಎಂಬವರ ಪುತ್ರ ಅಜ್ವೀನ್‌ ಮೃತಪಟ್ಟವರು. ಹಜ್ವೀನ್ ಅವರು ಮೀನುಗಾರಿಕೆ ಕೆಲಸಕ್ಕಾಗಿ ಮಂಗಳೂರು ಬಂದರಿಗೆ ಮುಂಜಾನೆ 3.30 ರ ಸುಮಾರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದಾಗ ಅಜ್ವೀನ್ ಬೈಕ್ ಹಿಂಬದಿಯಿಂದ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದೆ.

ಕೂಡಲೇ ಅಜ್ವೀನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಸಂಚಾರ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular