Saturday, July 12, 2025
Flats for sale
Homeಜಿಲ್ಲೆಮಂಗಳೂರು ; ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಪೀಕರ್ ಯು.ಟಿ ಖಾದರ್ ರವರಿಂದ ವಿವಿಧ ಕಾಮಗಾರಿಗಳ...

ಮಂಗಳೂರು ; ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಪೀಕರ್ ಯು.ಟಿ ಖಾದರ್ ರವರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ…!

ಮಂಗಳೂರು ; ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ,ತಾಲೂಕು ಪಂಚಾಯತ್ ಮಂಗಳೂರು ನೀರುಮಾರ್ಗ ಗ್ರಾಮ ಪಂಚಾಯತ್ ಮತ್ತು ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಇಂದು ಮಂಗಳೂರಿನ ನೀರುಮಾರ್ಗದಲ್ಲಿ ನಡೆಯಿತು.

ನಾಡಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಬಳಿಕ ಎಸ್.ಎಸ್.ಎಲ್.ಸಿ ಯ ಕೆ.ರೂಪಾಲಿರಾವ್,ಇಜಾರ ಸಾಹಿಲ್,ಲಿಜಾ ರೂಜ್ ಮೊಂತೆರೊ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ವಿಕಲಚೇತರಿಗೆ ಹಾಗೂ ಕ್ರೀಡಾ ಸಾಧಕರಿಗೆ ಚೆಕ್ ವಿತರಣೆ ನಡೆಯಿತು.

ವಿಧಾನ ಸಭಾಸ್ಪೀಕರ್ ಯು.ಟಿ ಖಾದರ್ ರವರು ವಿವಿಧ ಕಾಮಗಾರಿಯ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ನೆರೆವೆರಿದಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉಧ್ಘಾಟನೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ರವರು ಉದ್ಘಾಟಿಸಿದರು.ಬಳಿಕ ನೀರ್ ಮಾರ್ಗ ಗ್ರಾಮ ಪಂಚಾಯತ್ – ಹಸಿರು ದಳ ಮಂಗಳೂರು ವತಿಯಿಂದ ಸನ್ಮಾನಿಸಿದರು.

ಬಳಿಕ ಮಾತನಾಡಿದ ಯು.ಟಿ ಖಾದರ್ ಅವರು ಗ್ರಾಮ ಪಂಚಾಯತ್ ಎಂದರೆ ಅದು ಗ್ರಾಮದ ಹೃದಯ, ಅ ಹೃದಯ ಭಾಗದ ಕಾಮಗಾರಿ ವೇಗವಾಗಿ ನಡೆದರೆ ಜಿಲ್ಲೆಯ ಕಾಮಗಾರಿಗೆ ವೇಗಪಡೆದಂತೆ ಎಂದರು. ಈ ಗ್ರಾಮಕ್ಕೆ ಇಂದು ಚಾಲನೆ ನೀಡಿದ ಶಂಕುಸ್ಥಾಪನೆ ಮಾಡಿದ ಕಾಮಗಾರಿ ಆದಷ್ಟು ಬೇಗ ನಡೆಯಲಿ ಎಂದರು. ಜನರಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಲಿ ಎಂದರು,ಎಲ್ಲಾ ಧರ್ಮದ ಮಕ್ಕಳು ಒಂದಾಗಿ ರಸ್ತೆಯಲ್ಲಿ ಒಂದಾಗಿ ನಡೆದು ಸಾಮಾರಸ್ಯ ಬೆಳೆಸಲಿ ಎಂದರು. ಸಾಮಾರಸ್ಯದ ಸಮಾಜವೆಂದರೆ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಮಾಡುವ ಅಭಿವೃದ್ಧಿ ಗ್ರಾಮದಲ್ಲಿ ಸಮಸ್ಯೆಗಳು ಬಹಳಷ್ಟು ಇದೆ ,ಅ ಸಮಸ್ಯೆಯನ್ನು ಒಗ್ಗಟ್ಟಾಗಿ ಪರಿಹಾರಿಸುವುದು ನಮ್ಮ ಕರ್ತವ್ಯ.ಜನರನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ ಅ ಕೆಲಸವನ್ನು ಮೊದಲು ಮುಂದುವರಿಸಿಕೊಂಡು ಮಾಡಿಕೊಳ್ಳಿ ಎಂದರು.

ನೀರು ಮಾರ್ಗ ಪಂಚಾಯತ್ ವ್ಯಾಪ್ತಿಯಲ್ಲಿ ವಿಶಿಷ್ಟ ಸಾಧನೆಗೈದ ಗಣ್ಯರಾದ ಮಹೇಶ್ ಕುಮಾರ್ ಹೊಳ್ಳ,ಮಹಮ್ಮದ್ ಬಾಷ, ಪದ್ಮನಾಭ ಕೋಟ್ಯಾನ್ ,ವಿಜಯ್ ಕೋಟ್ಯಾನ್ ರವರಿಗೆ ಗೌರವ ಸನ್ಮಾನ ನಡೆಯಿತು.

ವೇದಿಕೆಯಲ್ಲಿ,ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು ,ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ , ಮಾಜಿ ತಾಲೂಕು ಪಪಂಚಾಯತ್ ಅಧ್ಯಕ್ಷ ಮೋನು,ಸಲೀಂ,ಕೆ.ಡಿಪಿ ಸದಸ್ಯ ಮೆಲ್ವಿನ್ ಡಿಸೋಜಾ,ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ,ಧ್ರುವ ತಿಮ್ಮಯ್ಯ ,ಅಬುಬಕರ್,ಮಹೇಶ್ ಕುಮಾರ್ ಹೊಳ್ಳ ಶ್ರಾವ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular