Saturday, July 18, 2026
Homeಜಿಲ್ಲೆಮಂಗಳೂರು : ಡಿ 3 ರಂದು ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಂಗಳೂರು : ಡಿ 3 ರಂದು ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಂಗಳೂರು ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.

ಬೆಂಗಳೂರಿನಿಂದ ಬೆಳಿಗ್ಗೆ 11 ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮಿಸಲಿದ್ದು, 11:40- ಕೊಣಾಜೆ ಮಂಗಳಗಂಗೋತ್ರಿಯಲ್ಲಿ ಶಿವಗಿರಿ ಮಠ ವರ್ಕಲಾ ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆಯೋಜಿಸಿರುವ ಶತಮಾನದ ಪ್ರಸ್ತಾನ ಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ, ಶ್ರೀ ಗುರುವಿನ ಮಹಾ ಸಮಾಧಿ ಶತಾಬಿ, ಸರ್ವಮತ ಸಮ್ಮೇಳನ ಶತಮಾನೋತ್ಸವ, ಯತಿ ಪೂಜೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12:30 – ಪೇಸ್, ಜ್ಞಾನ ನಗರ, ಕೊಣಾಜೆ ವತಿಯಿಂದ ಆಯೋಜಿಸಿರುವ ಪೇಸ್ ಮತ್ತು ಎ.ಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ, ಪೇಸ್ ಟ್ರೆಡ್ ಪಾರ್ಕ್ ಮತ್ತು ಪೇಸ್ ಸ್ಪೋರ್ಟ್ಸ್ ಅರೆನಾ ಇದರ ಶಿಲಾನ್ಯಾಸ ಹಾಗೂ ಪೇಸ್‌ಕೇರ್ಸ್ ಸಮುದಾಯ ಸೇವಾ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 1:15- ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ವಕೀಲರ ಬಾರ್ ಅಸೋಸಿಯೇಷನ್‌ರವರ-ಭೇಟಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ 4:30 ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular