Thursday, July 23, 2026
Homeಜಿಲ್ಲೆಮಂಗಳೂರು : ನಾರಾಯಣ ಗುರು ಸರ್ಕಲ್ ನಿಂದ ಪಿವಿಎಸ್ ಸರ್ಕಲ್ ವರೆಗೆ ಪ್ರಧಾನಿ ನರೇಂದ್ರ ಮೋದಿ...

ಮಂಗಳೂರು : ನಾರಾಯಣ ಗುರು ಸರ್ಕಲ್ ನಿಂದ ಪಿವಿಎಸ್ ಸರ್ಕಲ್ ವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ : ಎಸ್‌ಪಿಜಿ ತಂಡದಿಂದ ಬದಲಾವಣೆ.

ಮಂಗಳೂರು : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಆದರೆ ನಿನ್ನೆ ಪ್ರಧಾನಿಯವರ ಎಸ್‌ಪಿಜಿ ತಂಡದ ಅಧಿಕಾರಿಗಳು ನಗರಕ್ಕೆ ಆಗಮಿಸಿ ಹಂಪನಕಟ್ಟಡವರೆಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಕಟ್ಟಡಗಳಲ್ಲಿ ಇರುವ ಜೇನುಗೂಡುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

ಎಸ್‌ಪಿಜಿ ತಂಡದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ ನಂತರ ಪ್ರಧಾನ ಮಂತ್ರಿಯವರ ರೋಡ್ ಶೋ ನಲ್ಲಿ ಅಲ್ಪ ಬದಲಾವಣೆಯಾಗಿದೆ ಎಂಬ ಮಾಹಿತಿ ದೊರೆತಿದೆ. 14ರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನಾರಾಯಣ ಗುರು ಸರ್ಕಲ್ ಬಳಿ ಆಗಮಿಸುತ್ತಾರೆ. ನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಬಳಿಕ ರೋಡ್ ಶೋ ಅರಂಭವಾಗಲಿದೆ ಎಂಬ ಮಾಹಿತಿ ದೊರೆತಿದೆ.

ಮೋದಿ ಅವರು ಸಾಗುವ ರೋಡ್‌ಶೋ ಮ್ಯಾಪ್‌ ಸಿದ್ಧವಾಗಿದ್ದು, ನಗರದ ಲೇಡಿಹಿಲ್‌ ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್‌, ಪಿವಿಎಸ್‌ ವೃತ್ತದವರೆಗೆ ಮಾತ್ರ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಮೊದಲು ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಸುಮಾರು 2.9 ಕಿಮೀ ರೋಡ್ ಶೋ ನಿಗದಿಯಾಗಿತ್ತು ಆದರೆ ರಸ್ತೆ ಪರಿಶೀಲನೆ ನಡೆಸಿದ ಎಸ್‌ಪಿಜಿ ತಂಡ ಪಿವಿಎಸ್ ವೃತ್ತದವರೆಗೆ ಬದಲಾವಣೆ ಮಾಡಿದೆ. ಅಂದರೆ 2.9ಕಿಮೀ ಬದಲಾಗಿ 1.8 ಕಿ.ಮೀ ರೋಡ್ ಶೋ ನಡೆಸಲಿರುವ ಮೋದಿ. ಮೋದಿ ರೋಡ್‌ ಶೋ ವೇಳೆ ಸುಮಾರು 1500ಕ್ಕೂ ಹೆಚ್ಚು ಪೊಲೀಸರ ಭದ್ರತೆಗೆ ನಿಯೋಜಿಸಲಾಗುತ್ತದೆ.

ದ.ಕ ಜಿಲ್ಲಾ ಬಿಜೆಪಿ ಸಿದ್ದಪಡಿಸಿದ್ದ ರೂಟ್ ಮ್ಯಾಪ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು.
ನಾರಾಯಣ ಗುರು ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಿಂದ ಆರಂಭವಾಗಲಿರೋ ರೋಡ್ ಶೋ ಅಲ್ಲಿಂದ ಲಾಲ್ ಭಾಗ್ ನ ಮಂಗಳೂರು ಪಾಲಿಕೆ ಕಚೇರಿ ಎದುರು ತಲುಪಲಿದೆ. ಅಲ್ಲಿಂದ ಬಳ್ಳಾಲ್ ಭಾಗ್ ದಾಟಿ ಎಂ.ಜಿ ರಸ್ತೆಯಲ್ಲಿ ಮುಂದೆ ಸಾಗಲಿದ್ದು, ಪಿವಿಎಸ್ ಸರ್ಕಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ.ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಿದ ಬಳಿಕ ಸುಮಾರು 20-30 ನಿಮಿಷಗಳಲ್ಲಿ ರೋಡ್ ಶೋ ಮುಕ್ತಾಯವಾಗೋ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular