ಮಂಗಳೂರು : ರಾಷ್ಟ್ರೀಯ ಬ್ಯಾಂಕ್ಗಳಿಗೆ ಹೋಗುವುದೆಂದರೆ ಟೆನ್ಶನ್ ಅದರಲ್ಲಿ ಅಲ್ಲಿನ ಉದ್ಯೋಗಿಗಳ ಜೊತೆ ಮಾತನಾಡುವುದೇ ದೊಡ್ಡ ಸಾಹಸ ಅಂತಹದರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯ ಬ್ಯಾಂಕಿನಿಂದ MSME ಯೋಜನೆಯಡಿಯಲ್ಲಿ Electro World Enterprises ಸಂಸ್ಥೆರವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 20 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿ, ಅದೇ ರೀತಿ M H Enterprises ಸಂಸ್ಥೆರವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 30 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿಕೊಂಡು, ಹಣವನ್ನು ಉದ್ದೇಶಿತ ವ್ಯವಹಾರಕ್ಕೆ ಬಳಸದೇ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿರುವ ಬಗ್ಗೆ ಸೆ 16 ರಂದು ಎಸ್.ಬಿ.ಐ ಚೀಪ್ ಮಾನ್ಯೇಜರ್ ರವರು ದೂರು ನೀಡಿದ್ದು ಈ ದೂರಿನಂತೆ ಮಂಗಳೂರು ಪೂರ್ವ ಠಾಣೆಯಲ್ಲಿ ಅ.ಕ್ರ 130/2025 ಮತ್ತು 131/2025 ಕಲಂ. 316(2), 316(5), 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ರಂತೆ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದೆ.
Electro World Enterprises ಸಂಸ್ಥೆಯ ವಂಚನೆಯ ಪ್ರಮುಖ ಆರೋಪಿ ನಾರ್ತನ್ ಸ್ಕೈ ಸಿಟಿ ಉಜ್ಜೋಡಿ ನಿವಾಸಿ ಮುನೀರ್ ಕದಮನ್ ಅಬೂಬಕರ್ ಮತ್ತು ಆತನಿಗೆ ಸಹಕರಿಸಿದ ಲಿಯೋನಾ ಅಪಾರ್ಟ್ ಮೆಂಟ್ ನಂದಿ ಗುಡ್ಡೆ ನಿವಾಸಿ ಹುಸೇನ್. ಪಿ ಎಂಬುವವರನ್ನು ಪತ್ತೆ ಮಾಡಲಾಗಿದ್ದು, ಇನ್ನೊಂದು ಪ್ರಕರಣದಲ್ಲಿ M H Enterprises ಸಂಸ್ಥೆಯ ಮಾಲೀಕ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಾಫ ಎಂಬಾತನನ್ನು ಪತ್ತೆ ಮಾಡಿ ಬಂಧಿಸಿ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುನೀರ್ ಕದಮನ್ ಅಬೂಬಕರ್ ಎಂಬಾತನು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದುಬಂದಿದ್ದು . ಎರಡು ಪ್ರಕರಣಗಳನ್ನು ಮುಂದಿನ ತನಿಖೆಯ ಬಗ್ಗೆ ಸಿಸಿಬಿ ಮಂಗಳೂರು ಘಟಕಕ್ಕೆ ವರ್ಗಾಹಿಸಲಾಗಿದೆ.
ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರೆಂದು ತಿಳಿದಿದೆ. ಲೋನ್ ನೆಪದಲ್ಲಿ ಸಂಸ್ಥೆಯ ಹೆಸರಿನಲ್ಲಿ ಸಾಲಪಡೆದು ವಿವಿಧ ಖಾತೆಗಳಿಗೆ ವರ್ಗಾಯಿಸಿ ಸ್ವಂತಕ್ಕೆ ಬಳಸಿದ್ದಲ್ಲದೆ ಬ್ರೋಕರ್ ಹಾಗೂ ಇನ್ನಿತರರ ಸಹಾಯದಿಂದ ಇಂತಹ ಡೀಲ್ ಕುದುರಿಸದರೆಂದು ಮಾಹಿತಿ ದೊರೆತಿದೆ.