ಮಂಗಳೂರು : ರೋಹನ್ ಎಸ್ಟೇಟ್ ಮುಕ್ಕ ಇದು ರೆಸಾರ್ಟ್ ಅಲ್ಲ ,ರೆಸಾರ್ಟ್ ಶೈಲಿಯ ವಸತಿ ಬಡಾವಣೆ ಶ್ರೀಮಂತಿಕೆ,ಐಷಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲ್ಲಿ ತಲೆ ಎತ್ತಿ ನಿಂತಿರುವ ವಸತಿ ಬಡವಣೆಯಾಗಿದೆ. ಇಲ್ಲಿ ವಾಸಿಸುವವರಿಗೆ ಅಭಿಜಾತ ರೆಸಾರ್ಟ್ ಶೈಲಿಯ ಅನುಭವ ಸಿಗಲಿದೆ ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿರುವ ಮಂಗಳೂರಿನ ರೋಹನ್ ಕಾರ್ಪೊರೇಷನ್ ಮತ್ತೊಂದು ವಸತಿ ಬಡಾವಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಂಗಳೂರಿನ ಮುಕ್ಕದಲ್ಲಿ ನಂದಿನಿ ನದಿಯ ಹಿನ್ನೀರಿನ ತಟದಲ್ಲಿ 15 ಎಕರೆಯಲ್ಲಿ ಈ ರೋಹನ್ ಎಸ್ಟೇಟ್ ಬಡಾವಣೆ ನಿರ್ಮಾಣವಾಗಿದೆ. ಪರಿಸರದ ಶ್ರೀಮಂತಿಕೆಯ ಜೊತೆಗೆ ಅತ್ಯಂತ ಸುರಕ್ಷಿತ ಹಾಗೂ ಆಕರ್ಷಕವಾಗಿ ಈ ಬಡಾವಣೆ ಮೂಡಿ ಬಂದಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ. ಈ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ಮಾರುಕಟ್ಟೆಗೆ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರೋಹನ್ ಕಾರ್ಪೊರೇಷನ್ನ ಮಾಲೀಕ ರೋಹನ್ ಮೊಂತೆರೋ ಮುಂದಿನ ಹದಿನೈದು ದಿನದೊಳಗೆ ಬಡಾವಣೆ ಬುಕ್ ಮಾಡಿದವರಿಗೆ 15 ಶೇಕಡಾ ರಿಯಾಯಿತಿ ನೀಡುವುದಾಗಿಯು ತಿಳಿಸಿದ್ರು. ಈ ಬಡಾವಣೆಯಲ್ಲಿ ಕ್ಲಬ್ ಹೌಸ್, ಬೋಟಿಂಗ್ ಮತ್ತು ಕಯಾಕಿಂಗ್, ಫ್ಯಾಮಿಲಿ ರೆಸ್ಟೋರೆಂಟ್, ಈಜುಕೊಳ, ಔಟ್ ಡೋರ್ ಜಿಮ್, ಸೈಕ್ಲಿಂಗ್, ವಾಕಿಂಗ್ ಟ್ರ್ಯಾಕ್, ಸ್ಪಾ, ಸಭಾಂಗಣ, ಲಾಡ್ಜಿಂಗ್ ಸೇರಿದಂತೆ ವಿಶೇಷ ಸೌಲಭ್ಯಗಳು ಇರುವುದು ಎಂದು ಹೇಳಿದ್ದಾರೆ.