Saturday, March 14, 2026
Flats for sale
Homeಜಿಲ್ಲೆಮಂಗಳೂರು : ಧರ್ಮ ದ್ವೇಷದ ಭಾಷಣ : ಸಹಾಯಕ ಪ್ರಾಧ್ಯಾಪಕನ ವಿರುದ್ಧ ಕೇಸ್ ದಾಖಲು.

ಮಂಗಳೂರು : ಧರ್ಮ ದ್ವೇಷದ ಭಾಷಣ : ಸಹಾಯಕ ಪ್ರಾಧ್ಯಾಪಕನ ವಿರುದ್ಧ ಕೇಸ್ ದಾಖಲು.

ಮಂಗಳೂರು : ನಗರದ ಹೊರವಲಯದ ಕಿನ್ಯದ ಕೇಶವ ಶಿಶು ಮಂದಿರದಲ್ಲಿ ಇತ್ತೀಚಿಗೆ ನಡೆದ ನವ ದಂಪತಿಗಳ ಸಮಾವೇಶದಲ್ಲಿ ಮಾಡಿದ್ದ ಬೇರೆ ಧರ್ಮಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿದ ಆರೋಪದ ಹಿನ್ನಲೆ ಡಾ.ಅರುಣ್ ಉಳ್ಳಾಲ್ ವಿರುದ್ಧ ಕೇಸ್ ​ದಾಖಲಾಗಿದೆ.

ಭಾಷಣದಲ್ಲಿ ಈ ರೀತಿ ಹೇಳಿದ್ದರು :

ಹಿಂದುಗಳು ಹಿಂದು ಮಾಲಿಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು. ಹಿಂದು ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು. ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ ಎಂದು ಅರುಣ್ ಉಳ್ಳಾಲ್ ಅವರು ಹೇಳಿದ್ದರು.

ಭಾಷಣದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹೆಚ್ಚೆತ್ತ ಎಡಪಂಥೀಯರು ಹಾಗೂ ಅನ್ಯ ಧರ್ಮೀಯರ ವಿರೋಧದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅರುಣ್ ಉಳ್ಳಾಲ್ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಿದ್ದು ಇದೀಗ ಕೇವಲ ಒಂದು ಭಾಷಣದಲ್ಲಿ ಕೆಲಸ ಕಳೆದುಕೊಳ್ಳುವಂತಾಗಿದೆ. ಧರ್ಮ ದ್ವೇಷದ ಭಾಷಣ ಮಾಡಿದ ಅರೋಪದಡಿ ಡಾ. ಅರುಣ್ ಉಳ್ಳಾಲ್ ವಿರುದ್ದ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 66(C) IT ACT AND 196, 351 (BNS), 2023 ರಂತೆ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular