Monday, October 20, 2025
Flats for sale
Homeಜಿಲ್ಲೆಮಂಗಳೂರು : ದ್ವಿಚಕ್ರ ವಾಹನದಲ್ಲಿ ಅಪ್ರಾಪ್ತ ಬಾಲಕರ ಜಾಲಿ ರೈಡ್,ಕಾನೂನು ಉಲ್ಲಂಘನೆ, ವಾಹನ ಮಾಲಿಕರಿಗೆ 29...

ಮಂಗಳೂರು : ದ್ವಿಚಕ್ರ ವಾಹನದಲ್ಲಿ ಅಪ್ರಾಪ್ತ ಬಾಲಕರ ಜಾಲಿ ರೈಡ್,ಕಾನೂನು ಉಲ್ಲಂಘನೆ, ವಾಹನ ಮಾಲಿಕರಿಗೆ 29 ಸಾವಿರ ದಂಡ ವಿಧಿಸಿದ ಜೆ.ಎಂ.ಎಫ್.ಸಿ ಕೋರ್ಟ್…!

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕರ ಅಡ್ಡಾದಿಡ್ಡಿ ಚಾಲನೆ ಹೆಚ್ಚಾಗುತ್ತಿದ್ದು ಪೋಷಕರು ಗಮನಹರಿಸದೆ ಇರುವುದು ಮುಖ್ಯ ಕಾರಣ ವಾಗಿದೆ. ಮಾಹಿತಿಯ ಪ್ರಕಾರ ಅಘಾತದಲ್ಲಿ ಹೆಚ್ಚು ಯುವಜನಾಂಗ ಮೃತಪಡುತ್ತಿರುವುದು ವರದಿಯು ತಿಳಿಸಿದೆ.

ಅದರಂತೆಯೇ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರಮೋಟಾರ್ ವಾಹನವನ್ನು ಚಾಲನೆ ಮಾಡಲು ಕೊಟ್ಟಂತಹ ಮಾರುತಿ ಕಂಬಾಲ್ ಇವರಿಗೆ ಮಾನ್ಯ ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಇವರು ಒಟ್ಟು 29,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈ ಅಪ್ರಾಪ್ತ ಬಾಲಕರು ಒಂದು ದ್ವಿಚಕ್ರ ವಾಹನದಲ್ಲಿ ನಾಲ್ವರೊಂದಿಗೆ ಚಲಿಸುತ್ತಿರುವ ಪೋಟೊ ಪತ್ತೆಯಾಗಿದ್ದು ಬಳಿಕ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯ ವಾಹನದ ಮಾಲಿಕರಿಗೆ ದೊಡ್ಡ ಮೊತ್ತದ ದಂಡವಿಧಿಸಿರುವುದು ಇತರ ಯುವ ಸವಾರರಿಗೆ ದಿಗಿಲುಬಡಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular