Friday, March 13, 2026
Flats for sale
Homeಜಿಲ್ಲೆಮಂಗಳೂರು : ದೈವನರ್ತಕ ಗಂಧಕಾಡು ಅಶೋಕ್ ಬಂಗೇರ ಹೃದಯಾಘಾತದಿಂದ ನಿಧನ.

ಮಂಗಳೂರು : ದೈವನರ್ತಕ ಗಂಧಕಾಡು ಅಶೋಕ್ ಬಂಗೇರ ಹೃದಯಾಘಾತದಿಂದ ನಿಧನ.

ಮಂಗಳೂರು : ಕರಾವಳಿಯಲ್ಲಿ ದೈವಾರಾಧನೆ ಅಂದರೆ ಒಂದು ವಿಶಿಷ್ಟ,ಆದರೆ ದೈವಗಳ ನರ್ತನೆಯ ಜೊತೆ ಕವಡೆ ಶಾಸ್ತ್ರ ದಲ್ಲಿ ಹೆಸರುವಾಸಿಯಾಗಿರುವ ನೊಂದವರ ಸಮಸ್ಯೆಗಳಿಗೆ ಪರಿಹಾರ ನೀಡುವುದರಲ್ಲಿ ನಿಸ್ಸಿಮರಾಗಿರುವ ಗಂಧಕಾಡಿನ ಅಶೋಕಣ್ಣ ಎಂದೇ ಹೆಸರುವಾಸಿಯಾಗಿರುವ ಅಶೋಕ್ ಬಂಗೇರರವರು ಇಂದು ಮುಂಜಾನೆ ಹೃದಯಾಘಾತದಿಂದ ಮಾರುತಪಟ್ಟಿದ್ದಾರೆ .

ಪದವಿನಂಗಡಿ ಸಮೀಪದ ಗಂಧಕಾಡು ನಿವಾಸಿ ಪದವಿನಂಗಡಿ ಶ್ರೀ ಕೊರಗಜ್ಜ ಸಾನಿಧ್ಯದ ದೈವಾರಾಧಕರಾದ, ಭಟ್ರಕುಮೇರು ಶ್ರೀ ಕೊರಗತನಿಯ ಕ್ಷೇತ್ರದ ದೈವಾರಾಧಕ, ಭಾಸ್ಕರ್ ಬಂಗೇರ ಇವರ ಸಹೋದರ ಅಶೋಕ್ ಬಂಗೇರ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು, ಮೃತರು ತಾಯಿ, ಐದು ಮಂದಿ ಸಹೋದರರು, ಪತ್ನಿ ಹಾಗೂ ಮೂವರು ಪುತ್ರಿಯರು ಸೇರಿದಂತೆ ಬಂಧು ವರ್ಗದವರನ್ನು ಅಗಲಿದ್ದಾರೆ.

ನಿನ್ನೆ ರಾತ್ರೆ ರಕ್ತೇಶ್ವರಿ ದೈವದ ಕೋಲಾ ನಡೆದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ .ಮೃತರ ನಿಧನಕ್ಕೆ ಹಲವಾರು ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular