ಬೆಳ್ತಂಗಡಿ : ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ನಿವಾಸಿ ಯುವಕನೋರ್ವ ದುಬೈನ ಹೋಟೆಲ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮೃತರನ್ನು ಮಹಮ್ಮದ್ ರಾಝಿಕ್ (24) ಎಂದು ಗುರುತಿಸಲಾಗಿದೆ. ಹೋಟೆಲ್ನಲ್ಲಿ ಉದ್ಯೋಗಿಯಾಗಿದ್ದ ಅವರು ಹೋಟೆಲ್ನಲ್ಲಿಯೇ ವಾಸವಾಗಿದ್ದರು. ರಾತ್ರಿ ಮಲಗಿ ಬಹಳ ಹೊತ್ತಾದರೂ ಏಳದ ಕಾರಣ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದು ಕೊಠಡಿಯ ಬಾಗಿಲು ತೆರೆದ ಸಂದರ್ಭದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಹೃದಯಾಘಾತದಿಂದ ರಾಝಿಕ್ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವರ್ಷ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಅವರು ವಿವಾಹವಾಗಿದ್ದರು. ಅವರು ಪತ್ನಿ, ನಾಲ್ಕು ತಿಂಗಳ ಮಗು, ತಂದೆ ಮತ್ತು ತಾಯಿಯನ್ನು ಅಗಲಿದ್ದಾರೆ.


