Sunday, July 13, 2025
Flats for sale
Homeಜಿಲ್ಲೆಮಂಗಳೂರು ; ದ.ಕ ಜಿಲ್ಲೆಯ ಇತಿಹಾಸವನ್ನು ಸ್ಮರಿಸಿ, ಮೊದಲಿನ ಸೌಹಾರ್ದತೆ ಮರಳಿ ಬರಲಿ,ಇದಕ್ಕೆ ಎಲ್ಲಾ ಧರ್ಮದ...

ಮಂಗಳೂರು ; ದ.ಕ ಜಿಲ್ಲೆಯ ಇತಿಹಾಸವನ್ನು ಸ್ಮರಿಸಿ, ಮೊದಲಿನ ಸೌಹಾರ್ದತೆ ಮರಳಿ ಬರಲಿ,ಇದಕ್ಕೆ ಎಲ್ಲಾ ಧರ್ಮದ ಮುಖಂಡರು ಕೈಜೋಡಿಸಿ ; ಶಾಂತಿ ಸಭೆಯಲ್ಲಿ ಗೃಹಸಚಿವ ಜಿ.ಪರಮೇಶ್ವರ್..!

ಮಂಗಳೂರು ; ಮಂಗಳೂರು ಶಾಂತಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಲ್ಲಾ ಧರ್ಮದ ಮುಖಂಡರನ್ನು ಕರೆದು ಶಾಂತಿ ಸಭೆನಡೆಸಿದರು.

ಬಳಿಕ ಮಾತನಾಡಿದ ಅವರು ಈ ಸಭೆಯನ್ನು ನಾವು ಯಾವುದೇ ದುರುದ್ದೇಶದಿಂದ ಕರೆದಿಲ್ಲ ಅಥವಾ ‌ದ.ಕ ಜಿಲ್ಲೆಗೆ ಯಾವುದೇ ಲೇಬಲ್ ಹಚ್ಚಲು ನಾವು ಕರೆದಿಲ್ಲ ಇತಿಹಾಸ ನೋಡಿದ್ರೆ ಇಡೀ ರಾಜ್ಯದಲ್ಲಿ ದ.ಕ ಜಿಲ್ಲೆಯಂಥ ಜಿಲ್ಲೆ ಮತ್ತೊಂದಿಲ್ಲ ಎಂದು ಹೇಳಿದರು.

ನೀವು ಬುದ್ದಿವಂತರು ಮಾತ್ರವಲ್ಲ, ಬಹಳಷ್ಟು ಕ್ರಿಯಾಶೀಲರು,ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕಬಹುದಾದ ಚಾಕಚಕ್ಯತೆ ಉಳ್ಳವರು
ಇಡೀ ದೇಶದ ಶಿಕ್ಷಣ ವ್ಯವಸ್ಥೆನ್ನ ನಿಯಂತ್ರಣ ಮಾಡೋರು ನೀವು ಲಕ್ಷಾಂತರ ಜನರು ವಿದ್ಯಾರ್ಥಿಗಳು ಇಲ್ಲಿ ಕಲಿತು ಹೋಗಿ ಜೀವನ ಕಟ್ಟುಕೊಂಡಿದ್ದಾರೆ ಎಂದು ಹೇಳಿದರು.

ದೇಶದ ಮೊದಲ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಕೊಡುಗೆ ಕೊಟ್ಟ ಜಿಲ್ಲೆ ದ.ಕ
ಸುಮಾರು‌ 38 ಜನರು ಇಂದು ತಮ್ಮ ಅಭಿಪ್ರಾಯ ಹೇಳಿದ್ದೀರಿ ಬಹಳಷ್ಟು ಜನರು ಒಳ್ಳೆಯ ಸಲಹೆ ಕೊಟ್ಟಿದ್ದೀರಿ, ಸರ್ಕಾರದ ಜವಾಬ್ದಾರಿ ತಿಳಿಸಿದ್ದೀರಿ, ಹರೀಶ್ ಪೂಂಜಾ, ಭರತ್ ಶೆಟ್ಟಿ, ಕಾಮತ್ ಸತ್ಯ ಹೇಳಿದ್ದೀರಿ ಇದೊಂದು ಸೈದ್ದಾಂತಿಕ ಜಗಳ ಅಂತ ನಿಜವಾದ ಸತ್ಯ ಹೇಳಿದ್ದೀರಿ ಎಂದರು.

ಆದರೆ ನಮ್ಮ‌‌ ಮಕ್ಕಳು ಇಂಥ ಭಯದಲ್ಲೇ ಬದುಕಬೇಕಾ? ನಾನು ನೆಹರೂ ಮೈದಾನಿಗೆ ಚಿಕ್ಕಂದಿನಲ್ಲಿ ಅಥ್ಲೀಟ್ ಆಗಿ ಬಂದಿದ್ದೆ ಆಗ ಯಾರೂ ಇಲ್ಲಿ ಹಿಂದೂ ಮುಸ್ಲಿಂ ಅಂದಿದ್ದನ್ನ ನಾನು ನೋಡಿಲ್ಲ ಹಾಗಾಗಿ ಇತಿಹಾಸ ಸ್ಮರಿಸಿಕೊಳ್ಳಿ, ದ.ಕ ಜಿಲ್ಲೆಯ ಅವಶ್ಯಕತೆ ಇದೆ, ನಾವು ನಿಮ್ಮ ಸಲಹೆಗಳನ್ನು ತೆಗೆದುಕೊಂಡು ಚರ್ಚೆ ಮಾಡಬೇಕಿದೆ,ಆ ಬಳಿಕ ಏನೆಲ್ಲಾ ಕ್ರಮ ವಹಿಸಬೇಕೋ ಅದನ್ನ ವಹಿಸ್ತೇನೆ
ಮುಖ್ಯಮಂತ್ರಿಗಳು ಸದನದಲ್ಲೇ ಡ್ರಗ್ಸ್ ವಿರುದ್ದ ಯುದ್ದ ಸಾರಿದ್ದಾರೆ,ನಾವು ಯಾವುದೇ ಕಾರಣಕ್ಕೂ ಮತ್ತೊಂದು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದರು.

ಮಂಗಳೂರು ಕಮಿಷನರ್, ಎಸ್ಪಿಗೂ ಅದನ್ನ ಖಡಕ್ ಆಗಿ ಹೇಳಿದ್ದೇನೆ,ಬಹಳ ಸಾಂಸ್ಕೃತಿಕವಾಗಿ ಐಶ್ವರ್ಯವಂತ ಜಿಲ್ಲೆ ದ.ಕ ,ಜಿಲ್ಲೆಯಲ್ಲಿ ಸೌಹಾರ್ದ ಸಮಾವೇಶ ಮಾಡುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ ಶಾಂತಿಯ ವಾತಾವರಣ ಕರಾವಳಿ ಪ್ರದೇಶದಲ್ಲಿ ಬರಬೇಕು,ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬಾರದು ಪೊಲೀಸರು ಇನ್ನೂ ಕಠಿಣವಾಗಿ ಹೋಗಲು ಅವಕಾಶ ಕೊಡಬೇಡಿ,ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ ಮುಂದಿನ ಅಧಿವೇಶನದಲ್ಲಿ ಹೊಸ ಕಾನೂನು ಮಂಡನೆ ಮಾಡ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular