Friday, March 13, 2026
Flats for sale
Homeಜಿಲ್ಲೆಮಂಗಳೂರು : ತೀಯಾ ಸಮುದಾಯದ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಏಪ್ರಿಲ್ 9 ರಿಂದ 11...

ಮಂಗಳೂರು : ತೀಯಾ ಸಮುದಾಯದ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಏಪ್ರಿಲ್ 9 ರಿಂದ 11 ರ ವರೆಗೆ ನಡಾವಳಿ ಉತ್ಸವ..!

ಮಂಗಳೂರು : ಮಂಗಳೂರು ನಗರದ ಹೃದಯ ಭಾಗವಾದ ಕೊಡಿಯಲ್‌ಬೈಲ್‌ನಲ್ಲಿ ಸ್ಥಿತವಾಗಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಶಕ್ತಿ ಶ್ರೀ ಭಗವತಿ ಮಾತೆಯು ಹದಿನಾಲ್ಕು (ಶ್ರೀ ಚೀರುಂಭ ಭಗವತೀ – ನಾಲ್ವರು. ಶ್ರೀ ಪಾಡಾಂಗರ ಭಗವತೀ – ಐವರು. ಶ್ರೀ ಪುಲ್ಲೂರಾಳಿ ಭಗವತೀ – ಐವರು) ಕಾರಣೀಕ ಮೆರೆದು ಭಕ್ತ ರಕ್ಷಕಿಯಾಗಿ ನೆಲೆನಿಂತುದರಿಂದ “ಕೂಟಕ್ಕಳ ಎಂಬುದಾಗಿ ಖ್ಯಾತಿ ಪಡೆದಿದೆ. ತೀಯಾ ಸಮುದಾಯ ಆರಾಧಿಸಿಕೊಂಡು ಬಂದಿದ್ದರೂ ಶ್ರೀ ಮಾತೆಯರು ಜಾತಿಯ ಚೌಕಟ್ಟನ್ನು ಮೀರಿ ಶರಣುಬಂದ ಭಕ್ತರನ್ನು ಹರಸಿ.. ಕಾಯುತ್ತಿರುವುದರಿಂದ ಸ್ಥಳೀಯ ಭಕ್ತಾದಿಗಳಿಂದ ಶ್ರೀ ಕ್ಷೇತ್ರವು “ಗುತ್ಯಮ್ಮ ಸ್ಥಾನವೆಂದೇ ಪ್ರಸಿದ್ದಿ ಪಡೆದಿದೆ. ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವವು ಏಪ್ರಿಲ್ 9 ರಿಂದ 11 ರವರೆಗೆ ಶೃದ್ಧಾ ಭಕ್ತಿಯಿಂದ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುಧೀರ್ ಬಿ.ಜೆಪ್ಪು ರವರು ತಿಳಿಸಿದ್ದಾರೆ.

ಶ್ರೀ ಕ್ಷೇತ್ರದ ವ್ಯಾಪ್ತಿಗೆ ಕೊಡಿಯಾಲ್ ಬೈಲು, ಕದ್ರಿ, ಜೆಪ್ಪು, ಬೋಳಾರ, ಕಂಕನಾಡಿ, ನೆತ್ರಕೆರೆ, ಸಜಿಪ, ಚೇಳೂರು, ಇರಾ ಕಲ್ಲಾಡಿ ಪಜೀರು, ನೀರುಮಾರ್ಗ, ಪಡುಬೊಂಡಂತಿಲ, ಬೆಳ್ಳೂರು ಮೊದಲಾದ 13 ಗ್ರಾಮಗಳು, ಕೆಳಗಿನ ಮನೆ ತರವಾಡು, ಜಪ-ವಿಷ್ಣುಮೂರ್ತಿ ಆದಿಕ್ಷೇತ್ರ, ಕಡವಿನ ಬಳಿ ಬೋಳಾರ ತರವಾಡು ಹಾಗೂ ಕದ್ರಿ ಕಣ್ಣಬೆಟ್ಟು ತರವಾಡು ಹೀಗೆ 4 ತರವಾಡುಗಳು ಒಳಪಟ್ಟಿದ್ದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂ ಬ್ರಹ್ಮಶ್ರೀ ನಾರಾಯಣ ಗುರುಗಳು ಭೇಟಿ ನೀಡಿದ ಪರಮ ಪಾವನ ಕ್ಷೇತ್ರವಾಗಿದ್ದು, ಪ್ರಸ್ತುತ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಿದ್ದಾರೆ ಎಂದರು.

ಏಪ್ರಿಲ್ 05-04-2025ನೇ ಶನಿವಾರ ಮಜಿ, ತುಂಬೆಯಲ್ಲಿ ಜರಗಲಿರುವ ಗೊನೆ ಮುಹೂರ್ತದಿಂದ ಮೊದಲ್ಗೊಂಡು ಮೀನ ಮಾಸ ದಿನ 26 ಸಲುವ ತಾ. 09-04-2025 ನೇ ಬುಧವಾರದಿಂದ ಮೀನ ಮಾಸ ದಿನ 28 ಸಲುವ ತಾ. 11-04-2025ನೇ ಶುಕ್ರವಾರ ಪರ್ಯಂತ ಶ್ರೀ ಕ್ಷೇತ್ರದಲ್ಲಿ ನಡಾವಳಿ ಉತ್ಸವವು ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮತ್ತು ಶ್ರೀ ಭಗವನ್ನಾಮ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಬೆಳಗ್ಗೆ ಭಂಡಾರ ಆರೋಹಣವಾಗಿ ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಹೋರಾಡಲಿದ್ದು . ಮಧ್ಯಾಹ್ನ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನೆರವೇರಲಿದೆ. ರಾತ್ರಿ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಲಿದ್ದು . ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು ಉಪಸ್ಥಿತರಿರುವರು .

ಎಂದಿನಂತೆ ಮಧ್ಯಾಹ್ನ 12.30ಕ್ಕೆ ಶ್ರೀ ಪಾಡಂಗರ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನಡೆಯಲಿದ್ದು ರಾತ್ರಿ 9.30ರಿಂದ ಭೇಟಿಕಳ, ಮೇಲೇರಿಗೆ ಅಗ್ನಿ ಸ್ಪರ್ಶ, ವೀರಸ್ತಂಭ ದರ್ಶನ, ರಾತ್ರಿ 1.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ, ಮುಂಜಾನೆ 4 ಗಂಟೆಗೆ ಕೆಂಡಸೇವೆ ನಡೆಯಲಿದೆ.ಬಳಿಕ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಮಹಾಪೂಜೆ, ರಾತ್ರಿ 9.30ಕ್ಕೆ ಕೆಂಡಸೇವೆ, ಮೂರ್ತಿದರ್ಶನ, ಭಂಡಾರ ಅವರೋಹಣ ನಡೆಯಲಿದೆ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಯವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ರೋಹಿದಾಸ್ ಬಂಗೇರ,ಆಡಳಿತ ಮೊಕ್ತೇಸ್ಥರು ವಿಶ್ವನಾಥ್ ಮಂಕಿಸ್ಟ್ಯಾಂಡ್,ಕೋಶಾಧಿಕಾರಿ ಲೋಕೇಶ್ ಬೋಳಾರ್,ಮೋನಪ್ಪ ಮಾಜಿ,ಸುಜನ್ ದಾಸ್ ಕುಡುಪು,ಪುರುಷ ಏನ್ .ಸಾಲ್ಯಾನ್ ನೆತ್ತರೆಕೆರೆ,ರಾಜಗೋಪಾಲ್,ಪುರಂದರ ಬೋಳಾರ್,ವಿಜಯ್ ಕುಮಾರ್,ರವೀಂದ್ರ .ಕೆ, ಶ್ರೀಮತಿ ಉಷಾ ಪ್ರಭಾಕರ್,ಉದಯ ಕುಡುಪು ಹಾಗೂ ಇನ್ನಿತರರು ಉಪಸ್ಥಿರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular