ಮಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಮೃತ್ಯು ಪಟ್ಟು ಓರ್ವ ಆಸ್ಪತೆಯಲ್ಲಿ ಮೃತಪಟ್ಟ ಘಟನೆ ತಲಪಾಡಿಯ ಮೇಲಿನ ಪೇಟೆಯಲ್ಲಿ ಸಂಭವಿಸಿದೆ.


ಮೃತರನ್ನು ರಿಕ್ಷಾ ಚಾಲಕ ಕೋಟೆಕಾರ್ ನಿವಾಸಿ ಹೈದರ್ ಅಲಿ (45),ಫರಂಗಿಪೇಟೆ ನಿವಾಸಿ ಅವ್ವಮ್ಮ(60),ಕೋಟೆಕಾರ್ ನಿವಾಸಿ ಖತೀಜಾ,ಹಸ್ನಾ,ನಫೀಸಾ (52) ಹಾಗೂ ಆಯಿಷಾ ಫಿದಾ (19) (ಅಜ್ಜಿನಡ್ಕ ಕೆ ಸಿ ರೋಡ್) ಎಂದು ತಿಳಿದಿದೆ.
ಈ ಘಟನೆ ಮಧ್ಯಾಹ್ನ 1.30 ರ ಸುಮಾರಿಗೆ ನಡೆದಿದ್ದು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಇದಲ್ಲದೆ, ಒಂದು ಮಗು ಕೂಡ ಸಾವನ್ನಪ್ಪಿದೆ. ಅಪಘಾತದ ಸಮಯದಲ್ಲಿ ಆಶ್ರಯ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಕೆಲವರು ಕುಳಿತಿದ್ದರು.
ಇದಲ್ಲದೆ, ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.