Saturday, July 25, 2026
Homeಜಿಲ್ಲೆಮಂಗಳೂರು: ತಲಪಾಡಿ ಟೋಲ್ ಗೇಟ್ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಚಾಲಕ ಸಾವು.

ಮಂಗಳೂರು: ತಲಪಾಡಿ ಟೋಲ್ ಗೇಟ್ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಚಾಲಕ ಸಾವು.

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟ್ ಬಳಿ ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿಯೊಂದು ಚಾಲಕ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಹರಿಯಾಣ ಮೂಲದ ಶಮೀಮ್ (38) ಮೃತ ವ್ಯಕ್ತಿ. ಟೀ ವಿರಾಮಕ್ಕೆಂದು ಶಮೀಮ್ ತನ್ನ ಕಂಟೈನರ್ ಲಾರಿಯನ್ನು ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಎಂದು ತಿಳಿದುಬಂದಿದೆ. ಅದರ ಮುಂದೆ ಅದೇ ಕಂಪನಿಗೆ ಸೇರಿದ ಇನ್ನೊಂದು ಕಂಟೈನರ್ ಲಾರಿ ನಿಂತಿತ್ತು. ಆದರೆ ಶಮೀಮ್ ಲಾರಿಯ ಮುಂದೆ ನಿಂತಿದ್ದಾಗ ಎದುರಿನಿಂದ ಬಂದ ಲಾರಿ ಏಕಾಏಕಿ ಚಲಿಸಿದ್ದು, ಎರಡು ಬೃಹತ್ ವಾಹನಗಳ ನಡುವೆ ಸಿಕ್ಕಿಬಿದ್ದ ಶಮೀಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ. ಶಮೀಮ್ ಹಾಗೂ ಇನ್ನೊಂದು ಲಾರಿ ಚಾಲಕ ಸಂಬಂಧಿಕರು.
RELATED ARTICLES

LEAVE A REPLY

Please enter your comment!
Please enter your name here

Most Popular