ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಅಂತ ಹೆಸರು ಇರುವಾಗಲೇ ಸಾಮನ್ಯವಾಗಿ ಸ್ವಚ್ಛ ಹಾಗೂ ಸ್ಮಾರ್ಟ್ ಆಗಿಯೇ ಇರಬೇಕು ಆದರೆ ಇಲ್ಲಿ ಎಲ್ಲಿಂದಲೋ ಬಂದು ತ್ಯಾಜವನ್ನು ನಗರದ ಇತರ ಭಾಗಗಳಲ್ಲಿ ಎಸೆದು ಸ್ವಚ್ಛತೆಗೆ ದಕ್ಕೆ ತರುವುದೆಂದರೆ ಅಧಿಕಾರಿಗಳಿಗೆ ತಲೆನೋವಿನ ಸಂಗತಿ ಆದರೆ ಅಧಿಕಾರಿಗಳು 5೦೦೦ ರೂಪಾಯಿ ದಂಡ ವಿಧಿಸಿದ್ದಾರೆ .

ತಲಪಾಡಿ ಗ್ರಾಮಪಂಚಾಯತ್ ಗೆ ಸಂಬಂದಿಸಿದ ತ್ಯಾಜವನ್ನು ರಾತ್ರೆವೇಳೆ ವಾಹನದ ಮೂಲಕ ತಂದು ರಾತ್ರೆವೇಳೆ ನಗರದ ಫೈಸಲ್ ನಗರ ಹಾಗೂ ಪಡೀಲ್ ಜಂಕ್ಷನ್ ನಲ್ಲಿ ಅಕ್ರಮವಾಗಿ ಸುರಿಯುತ್ತಿದ್ದ ವಾಹನವನ್ನು ತಡೆದು ದಂಡ ವಿಧಿಸಿದ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಮಾಹಿತಿಯ ಮೇರೆಗೆ ಹಾಗು ಕಳೆದ ಕೆಲವು ದಿನಗಳಿಂದ ಸ್ಥಳೀಯರ ದೂರಿನ ಅನ್ವಯ ಕಳೆದ ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದರು ಕಣ್ಣಿಗೆ ಕಾಣದಂತೆ ತ್ಯಾಜ್ಯವನ್ನು ಸುರಿದು ಹೋಗುತಿದ್ದ ಟೆಂಪೋ ಇಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಕೈಗೆ ಕೊನೆಗೂ ಸಿಕ್ಕಿ ಬಿದ್ದಿದ್ದು ಹಿರಿಯ ಪರಿಸರ ಅಧಿಕಾರಿ ಸುಶಾಂತ್ ಕೆ ,ಆರೋಗ್ಯ ನಿರೀಕ್ಷಕ ಶಾಜಿತ್ ಮತ್ತು ಪ್ರವೀಣ್ ಆಂಟೋನಿ ಮೇಲ್ವಿಚಾರಕರೊಂದಿಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಟೆಂಪೋವನ್ನು ತಡೆದು 5೦೦೦ ರೂಪಾಯಿ ದಂಡ ವಿಧಿಸಿದ್ದಾರೆ.


