ಮಂಗಳೂರು : ನಗರದ ಹೊರವಲಯದ ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ.
ಮೃತರನ್ನು ಹುನಗುಂದ ತಾಲೂಕಿನ ನಿವಾಸಿ ಬಾಳಪ್ಪ (45) ಎಂದು ಗುರುತಿಸಲಾಗಿದೆ. ಐವರು ಕಾರ್ಮಿಕರು ಖಾಸಗಿ ಆಸ್ತಿಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಕೆಲಸದ ಸಮಯದಲ್ಲಿ, ಗುಡ್ಡವನ್ನು ಅಗೆಯಲು ಜೆಸಿಬಿಯನ್ನು ಬಳಸುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳದಲ್ಲಿ ಗಾರೆ ಹಿಡಿದು ಕೆಲಸ ನಿರ್ವಹಿಸುತ್ತಿದ್ದ ಬಾಳಪ್ಪ ಹಠಾತ್ ಕುಸಿತದ ನಂತರ ಮಣ್ಣಿನಡಿಯಲ್ಲಿ ಹೂತುಹೋಗಿದ್ದು ತೀವ್ರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..


