Saturday, December 14, 2024
Flats for sale
Homeಜಿಲ್ಲೆಮಂಗಳೂರು ; ಡಿ.14 ರಂದು ಅಖಿಲ ಭಾರತ ಮುದ್ರಣ ಒಕ್ಕೂಟ ಸಂಘದಿಂದ 2 ನೇ ಅಂತರಾಷ್ಟ್ರೀಯ...

ಮಂಗಳೂರು ; ಡಿ.14 ರಂದು ಅಖಿಲ ಭಾರತ ಮುದ್ರಣ ಒಕ್ಕೂಟ ಸಂಘದಿಂದ 2 ನೇ ಅಂತರಾಷ್ಟ್ರೀಯ MSME TECH SUMMIT…!

ಮಂಗಳೂರು ; ಅಖಿಲ ಭಾರತ ಮುದ್ರಣಕಾರರ ಒಕ್ಕೂಟದಲ್ಲಿ ಇದರ ಸದಸ್ಯರು ಗಳು ಇದೊಂದು ರಾಷ್ಟ್ರ ಮಟ್ಟದ ಸದಸ್ಯತ್ವ ಹೊಂದಿರುವ ಸಂಸ್ಥೆಯಾಗಿದ್ದು ತನ್ನ ಗೌರ್ನಿಂಗ್ ಸಭೆಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸುವುದು ರೂಢಿಯಾಗಿದೆ. 266 ನೇ ಜಿ.ಸಿ ಸಭೆ ಗೋವಾದಲ್ಲಿ ನಡೆದಿದ್ದು 267 ನೇ ಜಿ.ಸಿ ಸಭೆ ಗೋವಾದಲ್ಲಿ ದಿನಾಂಕ 13.12.2024 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಫೆಡೆರೇಶನ್ ಜಿ.ಸಿ ಸದಸ್ಯರುಗಳು ಪ್ರಿಂಟಿಂಗ್ ,ಪಬ್ಲಿಷಿಂಗ್, ಪ್ಯಾಕೆಜಿಂಗ್ ಕುರಿತ ವಿಷಯಗಳ ಬಗ್ಗೆ ಚರ್ಚಿಸಿ ಮುದ್ರಣ ಕ್ಷೇತ್ರದ ಮುಂದಿನ ಹಾದಿ ಹೇಗೆ ಸಾಗಬೇಕು ಎಂಬುದರ ಬಗ್ಗೆ ಸವಿರವಾಗಿ ಚರ್ಚೆ ನಡೆಯಲಿದೆ. ಇದಲ್ಲದೆ ಮುದ್ರಣ ಕ್ಷೇತ್ರದ ಕ್ಷೀಪ್ರ ಬೆಳವಣಿಗೆಗಳು ,ಬದಲಾವಣೆಗಳು ,ಕಚ್ಚಾ ವಸ್ತುಗಳ ಸಮಸ್ಯೆ, ವಿಭಾಗೀಯ ಸಮಸೆಗಳು ಸರಕಾರದ ನೀತಿಗಳು ,ಸದಸ್ಯರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಡಿ.14 ರಂದು ಎಂ,ಎಸ್,ಎಂ.ಇ ಮಂತ್ರಾಲಯ ಕೇಂದ್ರ ಸರಕಾರದ ಸಹಯೋಗದಲ್ಲಿ 2nd international conference ,MSME TECH SUMMIT – 2024 ನಗರದ ಒಶೀಯನ್ ಪರ್ಲ್ ನಲ್ಲಿ ನಡೆಯಲಿದೆ ‌. ಈ ಶೃಂಗ ಸಮಾರಂಭವನ್ನು ದ.ಕ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರೀಜೇಶ್ ಚೌಟರವರು ಉದ್ಘಾಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಎಂ.ಜಿ ಬಾಲಕೃಷ್ಣ ರವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಸಭೆಯು ಅಂತರಾಷ್ಟ್ರೀಯ ಸ್ವರೂಪವಾಗಿದ್ದು ಮುದ್ರಣ ಕ್ಷೇತ್ರದಲ್ಲಿ ಪ್ರತಿಭಾವಂತ ಉದ್ಯಮಿಗಳು ,ದೇಶ ವಿದೇಶಗಳಿಂದ ಮುದ್ರಣ ಕ್ಷೇತ್ರದ ತಂತ್ರಜ್ಙರು ಹಾಗೂ ಅಂತರಾಷ್ಟ್ರೀಯ ಮಟ್ಟದ ಮುದ್ರಣ ಕ್ಷೇತ್ರದ ಸಂಬಧಿಸಿದ ಸ್ಪೀಕರ್ ಗಳು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರಾದ ಸತೀಶ್ ಮಲ್ಹೋತ್ರಾರವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಿ.ಎರ್ ಜನಾರ್ಧನ್,ಅಶೋಕ್ ಕುಮಾರ್ ,ಸತೀಶ್ ಮಲ್ಹೋತ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular