Sunday, March 15, 2026
Flats for sale
Homeಜಿಲ್ಲೆಮಂಗಳೂರು : ಜೆರೋಸಾ ಶಾಲೆಯಾ ಪ್ರಕರಣದಲ್ಲಿ ಆಡಿಯೋ ವೈರಲ್ ಮಾಡಿದ ಆರೋಪ, ವಿದೇಶದಿಂದ ಮಹಿಳೆಗೆ ಜೀವ...

ಮಂಗಳೂರು : ಜೆರೋಸಾ ಶಾಲೆಯಾ ಪ್ರಕರಣದಲ್ಲಿ ಆಡಿಯೋ ವೈರಲ್ ಮಾಡಿದ ಆರೋಪ, ವಿದೇಶದಿಂದ ಮಹಿಳೆಗೆ ಜೀವ ಬೆದರಿಕೆ ಕರೆ.

ಮಂಗಳೂರು : ಕಳೆದ ಹಲವು ದಿನದಿಂದ ನಡೆಯುವ ಜೆರೊಸಾ ಶಿಕ್ಷಣ ಸಂಸ್ಥೆಯ ಆರೋಪ ಪ್ರತ್ಯಾರೋಪ ದಿನಕ್ಕೊಂದು ತಿರುವು ಪಡೆಯುತ್ತಿದೆ ,ಈದೀಗ ಮೊದಲು ತಪ್ಪೊಪ್ಪಿಕೊಂಡ ಶಿಕ್ಷಣ ಸಂಸ್ಥೆ ನಂತರ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ರವರ ಮಾತನ್ನು ಕೇಳಿ ತಣಿಸಿದ್ದ ವಿಚಾರ ಉರಿಯುವ ಬೆಂಕಿಗೆ ತುಪ್ಪಸುರಿದಂತಾಗಿದೆ,ಈ ಬಗ್ಗೆ ಹಲವು ನಾಯಕರು ಇವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.ಮೂಲಗಳ ಪ್ರಕಾರ ಪ್ರಭಾ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದಂತೂ ನಿಜ ,ರಾಜಕೀಯ ಜಿದ್ದಾಜಿದ್ದಿನ ಹಸ್ತಕ್ಷೇಪದಿಂದ ಹಿಂದೂ ಕ್ರೈಸ್ತ ರ ನಡುವೆ ದ್ವೇಷ ಬಿತ್ತುವ ತರಹ ಆದಂತೆ ಸದ್ಯದ ಪರಿಸ್ಥಿತಿ ಹದಗೆಟ್ಟಿದೆ. ಈ ಪ್ರಭಾ ಸಿಸ್ಟರ್ ವಿರುದ್ಧ ಇದಕ್ಕಿಂತ ಮೊದಲು ಹಲವು ಬಾರಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು ಆದರೆ ಪ್ರಚಾರ ಮಾಡಿಲ್ಲವೆಂದು ಪೋಷಕರು ತಿಳಿಸಿದ್ದಾರೆ.

ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅದಲ್ಲದೆ ವಿದೇಶದಿಂದ ಈ ಪ್ರಕರಣಕ್ಕೆ ನೀವೇ ಕಾರಣ ಎಂದು ಹೇಳಿ ಮಹಿಳೆಯ ನಂಬರ್ WTS UP,ಹಾಗೂ ಫಾಸಬುಕ್ನಲ್ಲಿ ಕುಟುಂಬದ ಫೋಟೋ ಹಾಗೂ ಮೊಬೈಲ್ ನಂಬರ್ ಅನ್ನು ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆ ಕವಿತಾ ರವರು ವೈರಲ್ ಆದ WTS UP ವಾಯ್ಸ್ ಅವರದಲ್ಲ ಇದರ ಬಗ್ಗೆ ತನಿಖೆ ನಡೆಸಿ ಎಂದು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಯಾರೋ ಕಿಡಿಗೇಡಿಗಳು ಕವಿತಾ ರವರ ನಂಬರ್ ಹಾಗೂ ಫೋಟೋವನ್ನು ಫೇಸ್ಬುಕ್ ಗೆ ಅಪ್ಡೇಟ್ ಮಾಡಿದ್ದಾರೆ .ಈ ಬಗ್ಗೆ ದಿನನಿತ್ಯ ವಿದೇಶ ಹಾಗೂ ಬೇರೆ ಕಡೆಗಳಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಶಾಲೆಯ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದೀರಿ ಎಂದು ಕರೆಗಳು ಬರುತ್ತಿವೆ ಎಂದು ಮಂಗಳೂರಿನ ಗರೋಡಿ‌ ನಿವಾಸಿ ಕವಿತಾ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಅವರು ದೂರು ನೀಡಿದ್ದಾರೆ.

ಜೆರೋಸಾ ಶಾಲೆಯಲ್ಲಿ ಕವಿತಾ ಅವರ ಮಗಳು ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಸಿಸ್ಟರ್ ಪ್ರಭಾ ವಿರುದ್ಧ ಪೋಷಕರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದಳು. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು .ಆಡಿಯೋ ವೈರಲ್ ಮಾಡುತ್ತೀಯಾ ಅಂತ ನಿರಂತರ ಬೆದರಿಕೆ ಕರೆ ಅವಾಚ್ಯವಾಗಿ ನಿಂದಿಸಿ ವಾಟ್ಸ್​ಆ್ಯಪ್​ಗೆ ಅಶ್ಲೀಲವಾದ ಆಡಿಯೋ ಸಂದೇಶ ಕಳುಹಿಸಲಾಗುತ್ತಿದೆ. ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲವು ಪುಂಡರು ವಾಟ್ಸ್​ಆ್ಯಪ್​ ಗ್ರೂಪ್​ಗೆ ಕವಿತಾ ಅವರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡುತ್ತಿದ್ದು ನಿರಂತರ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಕವಿತಾರವರು ಆಡಿಯೋ, ವಾಟ್ಸ್​ಆ್ಯಪ್ ಸ್ಕ್ರೀನ್ ಶಾಟ್​ಗಳ ಸಹಿತ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular