Saturday, July 18, 2026
Homeಜಿಲ್ಲೆಮಂಗಳೂರು : ಜೆಪ್ಪಿನಮೊಗರು ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ : ಎನ್ಎಸ್ ಯುಐ ಮುಖಂಡ...

ಮಂಗಳೂರು : ಜೆಪ್ಪಿನಮೊಗರು ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ : ಎನ್ಎಸ್ ಯುಐ ಮುಖಂಡ ಸೇರಿ ಇಬ್ಬರು ಸಾವು..!

ಮಂಗಳೂರು : ತಡರಾತ್ರಿ‌ ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಎನ್ಎಸ್ ಯುಐ ಮುಖಂಡ ಓಂ ಶ್ರೀ ಹಾಗೂ ಕದ್ರಿ‌ ನಿವಾಸಿ ಅಮನ್ ರಾವ್ ಸಾವನಪ್ಪಿದ ಘಟನೆ ನಡೆದಿದೆ.

ಚಾಲಕನ ಅತೀ ವೇಗಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದ್ದು ಐವರು ಯುವಕರಿದ್ದ ಕಾರು ತಲಪಾಡಿಯಿಂದ ಮಂಗಳೂರಿಗೆ ಸಂಚಾರಿಸುವ ಸಂದರ್ಭದಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಜೊತೆಯಲ್ಲಿದ್ದ ವಂಶಿ ಮತ್ತು ಆಶಿಕ್ ಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಗಿದ್ದಾನೆ.

ಮೃತ ಇಬ್ಬರು ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular