Saturday, March 14, 2026
Flats for sale
Homeಜಿಲ್ಲೆಮಂಗಳೂರು : ಬಂಟ್ವಾಳದ ರಹೀಮ್ ಹತ್ಯೆ ಬೆನ್ನಲೇ ಕಾಂಗ್ರೆಸ್ ಮುಸ್ಲಿಮರು ಸಭೆಯಲ್ಲಿ ರಣಾಂಗಣ, ಹಲವು ಮುಖಂಡರು...

ಮಂಗಳೂರು : ಬಂಟ್ವಾಳದ ರಹೀಮ್ ಹತ್ಯೆ ಬೆನ್ನಲೇ ಕಾಂಗ್ರೆಸ್ ಮುಸ್ಲಿಮರು ಸಭೆಯಲ್ಲಿ ರಣಾಂಗಣ, ಹಲವು ಮುಖಂಡರು ರಾಜೀನಾಮೆ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು ಇದರಿಂದ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಅದನ್ನು ತಡೆಯುವಲ್ಲಿ ರಾಜ್ಯ ಗೃಹ ಇಲಾಖೆಯ ವೈಫಲ್ಯ ಮತ್ತು ಜಿಲ್ಲೆಯ ಮುಸ್ಲಿಮರ ಕಡೆಗಣನೆಗೆ ಬೇಸತ್ತು ಮಂಗಳೂರಿನ ಬೋಳಾರದಲ್ಲಿರುವ ಶಾದಿ ಮಹಲ್ ಸಭಾಂಗಣದಲ್ಲಿ ರಾಜ್ಯ ಪ್ರ.ಕಾರ್ಯ ದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಉಪಾಧ್ಯಕ್ಷ ಕೆ.ಅಬ್ದುಲ್ ರವೂಫ್ ಸೇರಿದಂತೆ ಹಲವರಿಂದ ವೇದಿಕೆಯಲ್ಲೇ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಮನವಿ ಮೇರೆಗ ಒಂದು ವಾರ ಸಮಯಾವಕಾಶ ನೀಡುವುದಾಗಿ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ‌ ಶಾಹುಲ್ ಹಮೀದ್ ಪ್ರಕಟಿಸಿದ್ದು ಗುರುವಾರ ನಡೆದ ತುರ್ತು ಸಭೆಯಲ್ಲಿ ಗದ್ದಲ, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು ಕಾರ್ಯಕರ್ತರ ಆಗ್ರಹಕ್ಕೆ ಮಣಿದು ವೇದಿಕೆಯಲ್ಲಿ ರಾಜ್ಯ ಪ್ರ.ಕಾರ್ಯ ದರ್ಶಿ ಎಂ.ಎಸ್. ಮಹಮ್ಮದ್,ಜಿಲ್ಲಾ ಉಪಾಧ್ಯಕ್ಷ ಕೆ.ಅಬ್ದುಲ್ ರವೂಫ್ ಶಾಹುಲ್ ಹಮೀದ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ರಾಜೀನಾಮೆ ಘೋಷಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದಿಂದ ಹಿಡಿದು ರಾಜ್ಯ ಘಟಕದವರೆಗಿನ ವಿವಿಧ ಹುದ್ದೆಗಳಲ್ಲಿರುವ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular